Tuesday, January 21, 2025
ಸುದ್ದಿ

ಸೌಜನ್ಯ ಕೊಲೆ ಪ್ರಕರಣ ; ಸಾಲಿಗ್ರಾಮ ರಥಬೀದಿಯಲ್ಲಿ ನ್ಯಾಯ ಕೋರಿ ಬೃಹತ್ ಪ್ರತಿಭಟನೆ – ಕಾಲ್ನಡಿಗೆ ಜಾಥ – ಕಹಳೆ ನ್ಯೂಸ್

ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ನೊಂದ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಲು ಆಗ್ರಹಿಸಿ ಆ. 19 ರಂದು ಶನಿವಾರ ಸಾಲಿಗ್ರಾಮ ರಥಬೀದಿಯಿಂದ ಬಸ್ಸು ನಿಲ್ದಾಣ ತನಕ ಕಾಲ್ನಡಿಗೆ ಜಾಥ ಹಾಗೂ ಬೃಹತ್ ಪ್ರತಿಭಟನಾ ಸಭೆ ನಡೆಯಿತು.


ವಕೀಲೆ ಅಂಬಿಕಾ ಪ್ರಭು ಮಾತನಾಡಿ, ಸೌಜನ್ಯ ಪ್ರಕರಣ ಮುಗಿದ ಅಧ್ಯಯವಲ್ಲ ಪ್ರಕರಣದ ಕಿಡಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಸರಕಾರ ಪ್ರಕರಣವನ್ನು ಲಘುವಾಗಿ ಸ್ವೀಕರಿಸಬಾರದು, ಗೃಹಮಂತ್ರಿಗಳು ಲಘುವಾದ ಹೇಳಿಕೆ ನೀಡಬಾರದು ಎಂದರು. ಸೌಜನ್ಯಾ ತಾಯಿ ಸಹಿತ ಈ ಪ್ರಕರಣದಲ್ಲಿ ಹೋರಾಡುವರನ್ನು ಮಾತಾಡುವರನ್ನು ಬೇರೆಬೇರೆ ರೀತಿ ನಿಂಧಿಸಲಾಗುತ್ತಿದೆ. ಮನೆಯ ಹೆಣ್ಮಗಳು ಸುಕ್ಷಿತರಾಗಿರಬೇಕಾದರೆ ಮನೆಮನೆಯಲ್ಲೂ ಹೋರಾಟ ಅಗತ್ಯ. ಇದಕ್ಕಾಗಿ ಜನರ ಬೆಂಬಲ ಅಗತ್ಯ. ಸೌಜನ್ಯಾ ಪ್ರಕರಣಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾನೂನು ಹೋರಾಟ ಕೂಡ ನಡೆಸಲಾಗುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಡಾ. ದಿನೇಶ್ ಗಾಣಿಗ ಮಾತನಾಡಿ, ನಮಗೂ ಬೆದರಿಕೆ ಕರೆಗಳು ಬರುತ್ತಿದ್ದು ಆದರೆ ನಾವು ಯಾವುದಕ್ಕೂ ಹೆದರದೆ ಸೌಜನ್ಯಾ ಕುಟುಂಬಕ್ಕೆ ನ್ಯಾಯ ಕೊಡುವುದು ನಿಶ್ಚಿತ. ಪ್ರಕರಣದ ದಿಕ್ಕು ತಪ್ಪಿಸುವರು ದಾಖಲಾತಿಯೊಂದಿಗೆ ಮಾತನಾಡಲಿ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸೌಜನ್ಯಾ ತಾಯಿ ಕುಸುಮಾವತಿ ನನ್ನ ಮಗಳಿಗಾದ ಅನ್ಯಾಯದ ಬಗ್ಗೆ ಕಳೆದ ೧೧ ವರ್ಷದಿಂದ ಹೋರಾಟ ಮಾಡುತ್ತಿದ್ದು ನ್ಯಾಯ ಸಿಗುವ ತನಕ ಹೋರಾಟ ನಿರಂತರವಾಗಿರುತ್ತದೆ. ಹಿಂದೆಯೇ ಆರೋಪಿಗಳ ಹೆಸರನ್ನು ನಾನು ಬಹಿರಂಗಪಡಿಸಿದ್ದೇನೆAದರು.ನನ್ನ ಮಗಳಿಗಾದ ಅನ್ಯಾಯ ಬೇರೆ ಯಾವ ಹೆಣ್ಣಿಗೂ ಆಗಬಾರದು ಎಂದು ಕಣ್ಣೀರು ಹಾಕಿದರು.
ಈ ಸಂದರ್ಭ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಕೋರಿ ಗುರುನರಸಿಂಹ, ಆಂಜನೇಯ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸೌಜನ್ಯಳ ಮಾವ ವಿಠಲ ಗೌಡ, ಸಾಮಾಜಿಕ ಹೋರಾಟಗಾರ ಸುಧೀರ್ ಮಲ್ಯಾಡಿ ಉಪಸ್ಥಿತರಿದ್ದರು.