Wednesday, January 22, 2025
ಸುದ್ದಿ

ಅಯ್ಯೋ ಮರಿ ಆನೆಯ ಕಾಲಿಗೆ ಏಟಾಗಿದೆ ನೋಡ್ರಿ.. : ಕುಂಟುತ್ತಾ ಹೆಜ್ಜೆ ಹಾಕಿದ ಮುದ್ದುಮರಿ –ಕಹಳೆ ನ್ಯೂಸ್

ಆನೆಯ ಹಿಂಡೊಂದು ರಸ್ತೆ ದಾಟುತ್ತಿದ್ದ ವೇಳೆ, ಮುದ್ದು ಮುದ್ದಾದ ಎರಡು ಮರಿಯಾನೆಗಳು ಕಾಣಿಸಿಕೊಂಡಿದೆ. ಇದರಲಿದ್ದ ಒಂದು ಮರಿಯಾನೆಯ ಎಡಗಾಲಿಗೆ ಗಂಬೀರ ಗಾಯವಾಗಿದ್ದು ಕುಂಟುತ್ತಾ ಹೆಜ್ಜೆ ಹಾಕಿದ್ದು, ಅಯ್ಯೋ ಎನ್ನುವಂತಿದೆ..

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ, ಬಂಡೀಪುರದಿoದ ಊಟಿಗೆ ತೆರಳುವ ಮಾರ್ಗದಲ್ಲಿ ಆನೆ ಹಿಂಡೊಂದು ರಸ್ತೆ ದಾಟುತ್ತಿತ್ತು.. ಈ ಹಿಂಡಿನಲ್ಲಿ ತಾಯಿ ಆನೆ ಜೊತೆ, ಮರಿ ಆನೆಯೊಂದು ಕಾಣಿಸಿದೆ. ಆದರೆ ಅದರ ಎಡಗಾಲಿಗೆ ಗಂಭೀರವಾದ ಗಾಯವಾಗಿದ್ದು ಕುಂಟುತ್ತ ನಡೆಯಲು ಕಷ್ಟ ಪಡುತ್ತಿದೆ. ಈ ದೃಶ್ಯ ರಸ್ತೆಯಲ್ಲಿ ತೆರಳುತ್ತಿದ್ದ ಪ್ರಯಾಣಿಕರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮರಿಯಾನೆಗೆ ಚಿಕಿತ್ಸೆಯ ಅಗತ್ಯವಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಈ ಬಗ್ಗೆ ಗಮನ ಹರಿಸಿ ಚಿಕಿತ್ಸೆ ನಿಡಬೇಕಾಗಿದೆ ಅನ್ನೋದು ಪ್ರಾಣಿ ಪ್ರಿಯರ ಮಾತು..