Wednesday, January 22, 2025
ಸುದ್ದಿ

ರಾಮಾಯಣ ಧಾರವಾಹಿ ನೋಡುತ್ತಾ ಎದ್ದು ನಿಂತು ಕೈ ಮುಗಿದ ವೃದ್ಧೆ – ಕಹಳೆ ನ್ಯೂಸ್

ರಾಮಾಯಣ ಹಾಗೂ ಮಹಾಭಾರತ.. ಇವುಗಳನ್ನ ಓದಿ ತಿಳಿದುಕೊಂಡವರಿಗಿoತ ಟಿವಿಯಲ್ಲಿ ಪ್ರಸಾರವಾದ ಧಾರವಾಹಿಗಳನ್ನ ನೊಡಿಯೇ ಕಥೆಗಳನ್ನ ಪುರಾಣದ ವಿಚಾರಗಳನ್ನ ಅರ್ಥ ಮಾಡಿಕೊಂಡವರೇ ಹೆಚ್ಚು.. 80-90ರ ದಶಕದಲ್ಲಿ ರಾಮಾಯಣ ಹಾಗೂ ಮಹಾಭಾರತ ಧಾರವಾಹಿಯಾಗಿ ಟಿವಿಯಲ್ಲಿ ಪ್ರಸಾರವಾಗ್ತಾ ಇದ್ರೆ ಊರಿನ ಜನರೆಲ್ಲ ಟಿವಿ ಮುಂದೆ ಒಂದಾಗ್ತಾ ಇದ್ದರು.. ಕೆಲವು ಸನ್ನಿವೇಶಗಳಿಗೆ, ಪಾತ್ರಗಳಿಗೆ ಮಾರು ಹೋಗಿ, ಟಿವಿಗೇ ಪೂಜೆ ಮಾಡುತ್ತಿದ್ದರು. ಹೀಗಾಗಿಯೇ ರಾಮಾಯಣ ಹಾಗೂ ಮಹಾಭಾರತ ಒಂದು ಕಾಲದ ಸೂಪರ್ ಹಿಟ್ ಧಾರವಾಹಿಗಳಾಗಿ ಎಕಲ್ಲರ ಮನ ಗೆದ್ದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಮತ್ತೆ ವಿಶ್ವವಿಖ್ಯಾತ ಪೌರಾಣಿಕ ಧಾರಾವಾಹಿ ‘ರಾಮಾಯಣ’ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಹೀಗೆ ವೃದ್ಧೆಯೊಬ್ಬರು ಮನೆಯಲ್ಲಿ ರಾಮಾಯಣ ಸೀರಿಯಲ್ ನೋಡುತ್ತಿದ್ದಾಗ ರಾಮ ಹಾಗೂ ಸೀತೆಯ ವಿವಾಹವಾಗುತ್ತಿದ್ದ ದೃಶ್ಯ ಕಂಡು ವೃದ್ದೆ ಎದ್ದು ನಿಂತು ಕೈ ಮುಗಿದಿದ್ದಾರೆ.

ಎಂದಿನoತೆ ವೃದ್ಧೆ ಟಿವಿಯಲ್ಲಿ ‘ರಾಮಾಯಣ’ ಸೀರಿಯಲ್ ನೋಡುತ್ತಿದ್ದರು. ಹೀಗೆ ಸೀರಿಯಲ್‌ನಲ್ಲಿ ರಾಮ ಹಾಗೂ ಸೀತೆಯ ವಿವಾಹದ ದೃಶ್ಯ ಪ್ರಸಾರವಾಗಿದೆ. ಈ ವೇಳೆ ವೃದ್ಧೆ ಟಿವಿಗೆ ಕೈ ಮುಗಿದು ಅವರ ಭಕ್ತಿಯನ್ನು ತೋರಿಸಿದ್ದಾರೆ. ಆದರೆ ಈ ವಿಡಿಯೋ ಮಾಡುತ್ತಿರುವುದು ವೃದ್ಧೆಗೆ ತಿಳಿದಿಲ್ಲ. ಹಾಗೇ ಟಿವಿಯನ್ನು ನೋಡುತ್ತಾ ನೋಡುತ್ತಾ ಕೈ ಮುಗಿಯುತ್ತಾರೆ. ಹೀಗೆ ವೃದ್ಧೆ ನಿಂತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.