Sunday, November 24, 2024
ಸುದ್ದಿ

ಅಯ್ಯೋದ್ಯೆ ರಾಮ ಮಂದಿರಕ್ಕೆ ಉಗ್ರರ ಕರಿ ನೆರಳು : ಹೈಟೆಕ್ ಭದ್ರತೆಗೆ ಪ್ಲಾನ್ – ಕಹಳೆ ನ್ಯೂಸ್

ಹಿಂದೂ ಧರ್ಮಕ್ಕೆ ಕಿರೀಟದಂತಿರೋ ಮರ್ಯಾದ ಪುರುಷ ಶ್ರೀರಾಮನ ಬೃಹತ್ ಮಂದಿರ ನಿರ್ಮಾಣ ಕಾರ್ಯ ಅಯೋಧ್ಯೆಯಲ್ಲಿ ಭರದಿಂದ ಸಾಗುತ್ತಿದೆ. ರಾಮನ ದರ್ಶನಕ್ಕಾಗಿ ಭಕ್ತುರು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಈ ಭಾಗ್ಯ ಸನ್ನಿಹಿತವಾಗುತ್ತಿದ್ದು ಮುಂದಿನ ವರ್ಷ ಜನವರಿಯ ವೇಳೆಗೆ ರಾಮ ಮಂದಿರ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ..ಆದರೆ ಈ ಮಧ್ಯೆ ಶ್ರೀರಾಮನ ಮೇಲೆ ಆಗಾಗ ಉಗ್ರರ ಬೆದರಿಕೆಗಳು ಬರ್ತಾನೆ ಇವೆ. ಹೀಗಾಗಿ ಶ್ರೀರಾಮನ ಮಂದಿರಕ್ಕೆ ಹೈಟೆಕ್ ಭದ್ರತೆ ನೀಡಲು ಪ್ಲಾನ್ ರೂಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಭಯೋತ್ಪಾದನಾ ದಾಳಿ ನಡೆಸುವ ಬೆದರಿಕೆ ಬಂದಿದ್ದು, ಹೀಗಾಗಿ ಅಯೋಧ್ಯೆಯ ರಾಮ ಮಂದಿರಕ್ಕೆ ಫುಲ್ ಹೈಟೆಕ್ ಭದ್ರತೆ ನೀಡಲಾಗುತ್ತಿದೆ. ಏಳು ಸುತ್ತಿನ ಭದ್ರಕೋಟೆ ನಿರ್ಮಿಸುವುದಕ್ಕೆ ಯುಪಿ ಸರ್ಕಾರ ಮತ್ತು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಂದಾಗಿದೆ. ಮೊದಲಿಗೆ ಜನ ದಟ್ಟಣೆಯ ನಿರ್ವಹಣೆ ಮಾಡುವುದಕ್ಕೆ ಪ್ಲಾನ್ ರೂಪಿಸಲಾಗಿದ್ದು, ಭಯೋತ್ಪಾದನಾ ನಿಗ್ರಹ ಪಡೆ ನಿಯೋಜನೆ ಮಾಡಲಾಗುತ್ತದೆ. ಇದರ ಜೊತೆಗೆ ಭದ್ರತೆಗಾಗಿಯೇ ಸ್ಪೆಷಲ್ ಟಾಸ್ಕ್ ಫೋರ್ಸ್ ರಚನೆ ಮಾಡಲು ಚಿಂತನೆ ನಡೆದಿದೆ. ಅಯೋಧ್ಯೆಯಲ್ಲೇ ವಿಪತ್ತು ನಿರ್ವಹಣಾ ತಂಡ ನಿಯೋಜನೆ ಮಾಡಲಾಗುತ್ತದೆ.

ಇನ್ನೂ ರಕ್ಷಣಾ ಸಿಬ್ಬಂದಿಗೆ ಬುಲೆಟ್ ಫ್ರೂಫ್ ಜಾಕೆಟ್‌ಗಳ ವ್ಯವಸ್ಥೆ, ಬುಲೆಟ್ ಪ್ರೂಫ್ ವಾಹನ, ಡ್ರ‍್ಯಾಗನ್ ಲೈಟ್ಸ್, ಬೈನಾಕ್ಯುಲರ್ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೂ ಅಯೋಧ್ಯೆಯಲ್ಲಿ ವಾಹನಗಳ ನಂಬರ್ ಪ್ಲೇಟ್ ಗುರುತಿಸುವ ಹೈಟೆಕ್ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆದಿದೆ. ಸಿಸಿ ಕ್ಯಾಮೆರಾ, ಡ್ರೋಣ್ ಕ್ಯಾಮೆರಾಗಳಿಂದ ಪ್ರತಿಯೊಂದು ಚಟುವಟಿಕೆಗಳ ಮಾನಿಟರಿಂಗ್, ಸುಪೀರಿಯರ್ ರೆಸಲ್ಯೂಷನ್ ಹೈ ಡೆಫಿಷನಿಷನ್ ಬುಲೆಟ್ ಕ್ಯಾಮೆರಾ, ಎಕ್ಸ್ರೇ ಬ್ಯಾಗೇಜ್ ಸ್ಕ್ಯಾನರ್, ಮೆಟಲ್ ಡಿಟೆಕ್ಟರ್‌ಗಳ ಅಳವಡಿಸಲಾಗುತ್ತಿದೆ.

ಸೈರನ್ ಸಹಿತ ಎಮರ್ಜೆನ್ಸಿ ಅಲಾರ್ಮ್ ವ್ಯವಸ್ಥೆಯ ಅಳವಡಿಸಲು ಪ್ಲಾನ್ ರೂಪಿಸಲಾಗಿದೆ. ಇನ್ನೂ ಸಿಸಿಕ್ಯಾಮೆರಾ ಅಳವಡಿಕೆಗೆ 10.97 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಆ್ಯಕ್ಸೆಸ್ ಕಂಟ್ರೋಲ್ ಸಿಸ್ಟಮ್ ಆಳವಡಿಕೆಗೆ 8.56 ಕೋಟಿ ರೂಪಾಯಿ ವೆಚ್ಚವಾಗಲಿದೆ. ರಕ್ಷಣಾ ಸಾಮಾಗ್ರಿಗಳು, ಗೆಜೆಟ್ಸ್ ಖರೀದಿಗೆ ಒಟ್ಟಾರೆ 31.41 ಕೋಟಿ ರೂಪಾಯಿ ಖರ್ಚಾಗುವ ಲೆಕ್ಕಾಚಾರ ಹಾಕಲಾಗಿದೆ. ಒಟ್ಟಾರೆಯಾಗಿ ಅಯೋಧ್ಯೆಯ ರಾಮ ಮಂದಿರಕ್ಕೆ ಫುಲ್ ಹೈಟೆಕ್ ಭದ್ರತೆ ನೀಡಲಾಗುತ್ತಿದೆ.