Monday, November 25, 2024
ಸುದ್ದಿ

ಮಧ್ಯಪ್ರಿಯರಿಂದ ಸರ್ಕಾರಕ್ಕೆ ಶಾಕ್ : ಫುಲ್‌ಟೈಟ್‌ಗೆ ಬ್ರೇಕ್ ಹಾಕಿದ ನಶೆರಾಜರು..! – ಕಹಳೆ ನ್ಯೂಸ್

ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿ ಉಚಿತ ಭಾಗ್ಯ ನೀಡುತ್ತಾ, ಈ ನಡುವೆ ಮಧ್ಯದ ಬೆಲೆಯನ್ನ ಸರ್ಕಾರ ಏರಿಕೆ ಮಾಡಿತ್ತು. ಹೀಗಾಗಿ ಮಧ್ಯ ಪ್ರಿಯರಂತು ಖಾಲಿ ಕಾಟ್ರು ಬಾಟ್ಲಿ ಹಂಗೆ ಲೈಫು ಅಂತ ಬೇಜಾರ್ ಆಗೋಗಿದ್ರು. ಆದ್ರೆ ಇದೀಗ ಬೆಲೆ ಏರಿಕೆ ಮಾಡಿದ ಸರ್ಕಾರಕ್ಕೆ ಎಣ್ಣ್ಯೆ ಪ್ರಿಯರು ಶಾಕ್ ಕೊಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಲೆ ಏರಿಕೆಯಾದ್ರೆ ಹೆಂಗೆ ಸ್ವಾಮಿ ಎಣ್ಣೆ ಹಾಕೋದು ಅಂತ ಬಾರ್ ಹತ್ರಾನೂ ಸುಳಿಯದೆ, ಎಣ್ಣೆ ಖರೀದಿಸಲು ನಿರಾಸಕ್ತಿ ತೋರಿದ್ದಾರೆ. ಇದರಿಂದಾಗಿ ಮದ್ಯ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿದ್ದು, ಭಾರತೀಯ ಮದ್ಯ ಮಾರಾಟ ಪ್ರಮಾಣದಲ್ಲಿ ಶೇ.1 ರಷ್ಟು ಕುಸಿತ ಕಂಡಿದೆ.

ಆದರೆ ಬಿಯರ್ ಮಾರಾಟದಲ್ಲಿ ಅಂತಹ ವ್ಯತ್ಯಯ ಕಂಡುಬoದಿಲ್ಲ. ರಾಜ್ಯ ಪಾನೀಯ ನಿಗಮಕ್ಕೆ ಲಿಕ್ಕರ್‌ಗೆ ಸಲ್ಲಿಸುವ ಖರೀದಿ ಬೇಡಿಕೆ ಇಳಿಕೆಯಾಗಿದೆ.

2022-ಆಗಸ್ಟ್: ಸ್ವದೇಶಿ ಬ್ರ‍್ಯಾಂಡ್ – 25.50 ಲಕ್ಷ ಬಾಕ್ಸ್, ಬಿಯರ್ – 10.34 ಲಕ್ಷ ಬಾಕ್ಸ್ ಮಾರಾಟ.
2023 ಆಗಸ್ಟ್: ದೇಶಿ ಬ್ರ‍್ಯಾಂಡ್ – 21.87 ಲಕ್ಷ ಬಾಕ್ಸ್, ಬಿಯರ್ – 12.52 ಲಕ್ಷ ಬಾಕ್ಸ್ ಮಾರಾಟ.
ಕಡಿಮೆ ದರದ ಬ್ರ‍್ಯಾಂಡ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಸ್ಕಾಚ್ ಪ್ರಿಯರು ಪ್ರೀಮಿಯರ್ ಬ್ರ‍್ಯಾಂಡ್ ಕಡೆಗೆ ವಾಲಿದ್ದಾರೆ. ಪ್ರೀಮಿಯಮ್ ಪ್ರಿಯರು ನಾರ್ಮಲ್ ಬ್ರ‍್ಯಾಂಡ್‌ಗೆ ಶಿಫ್ಟ್ ಆಗಿದ್ದಾರೆ. ಹೀಗಾಗಿ ಸರ್ಕಾರಿ ಆದಾಯ ಸಂಗ್ರಹದ ಮೇಲೂ ಪರಿಣಾಮ ಬೀರಿದೆ.
ಹಾಗಾದ್ರೆ ತಿಂಗಳ ಲೆಕ್ಕದ ಆದಾಯ ಎಷ್ಟಿದೆ.?
ಏಪ್ರಿಲ್ – 2,308 ಕೋಟಿ ರೂ.
ಮೇ – 2,607 ಕೋಟಿ ರೂ.
ಜೂನ್ – 3,549 ಕೋಟಿ ರೂ.
ಜುಲೈ – 2,980 ಕೋಟಿ ರೂ.
ಐಎಂಎಲ್ ಮೇಲೆ ಶೇ.20 ರಷ್ಟು ಸುಂಕ ಹೆಚ್ಚಳ ಪರಿಣಾಮವಾದ ಪರಿಣಾಮ ಎಲ್ಲಾ 18 ಸ್ಲಾಬ್‌ಗಳ ಲಿಕ್ಕರ್ ದರ ಏರಿಕೆಯಾಗಿದೆ. ಪ್ರತಿ ಪೆಗ್‌ಗೆ 10ರಿಂದ 20 ರೂಪಾಯಿ ಹೆಚ್ಚಳವಾಗಿದೆ. ಪ್ರತಿ ಬಾಟಲ್‌ಗೆ 50ರಿಂದ 200 ರೂ. ಏರಿಕೆ ಕಂಡಿದೆ. ಪ್ರತಿ ತಿಂಗಳು ಸರಾಸರಿ 61ಲಕ್ಷ ಟನ್ ಬಾಕ್ಸ್ ಮಾರಾಟವಾಗುತ್ತಿತ್ತು. ಬೆಲೆ ಏರಿಕೆಯಿಂದ ಆಗಸ್ಟ್ ನಲ್ಲಿ  18.8 ಲಕ್ಷ ಟನ್ ಮಧ್ಯಪ್ರಿಯರಿಂದ ಸರ್ಕಾರಕ್ಕೆ ಶಾಕ್ : ಫುಲ್‌ಟೈಟ್‌ಗೆ ಬ್ರೇಕ್ ಹಾಕಿದ ನಶೆರಾಜರು.