ಕೆಆರ್ಎಸ್ನಲ್ಲಿ ಪ್ರವಾಸಿಗರಿಗೆ ನಾಯಿ ಕಂಟಕ.. : ಬೃಂದಾವನದ ಸೊಬಗು ನೋಡ ಬಂದವರನ್ನ ಬೆನ್ನಟ್ಟಿ ಕಚ್ಚಿದ ನಾಯಿ – ಕಹಳೆ ನ್ಯೂಸ್
ಮಂಡ್ಯದ ಕೆಆರ್ಎಸ್ ನಲ್ಲಿ ಚಿರತೆ ಭಯದ ಬಳಿಕ ಇದೀಗ ಪ್ರವಾಸಿಗರಿಗೆ ನಾಯಿ ಕಂಟಕ ಎದುರಾಗಿದೆ. ಬೃಂದಾವನದ ಸೊಬಗು ನೊಡಲು ಬಂದ 15ಜನಕ್ಕೆ ನಾಯಿ ಕಚ್ಚಿರುವ ಘಟನೆ ನಿನ್ನೆ ರಾತ್ರಿ ನಡೆದೆ.
ವೀಕೆಂಡ್ ಹಿನ್ನೆಲೆ ನಿನ್ನೆ ಕೆಆರ್ಎಸ್ನಲ್ಲಿ ಧ್ವನಿ ಬೆಳಕು ಕಾರಂಜಿ ನೋಡಲು ಪ್ರವಾಸಿಗರ ದಂಡು ಹರಿದು ಬಂದಿತ್ತು. ಈ ವೇಳೆ ನಾಯಿ ಏಕಾಏಕಿ ಪ್ರವಾಸಿಗರತ್ತ ನುಗ್ಗಿದೆ. ಸುಮಾರು 15 ಜನರಿಗೆ ನಾಯಿ ಕಚ್ಚಿದ್ದು, ನಾಯಿ ದಾಳಿಯಿಂದ ದಿಕ್ಕೆಟ್ಟು ಪ್ರವಾಸಿಗರು ಓಡಿದ್ದಾರೆ.
ನಾಯಿ ಅವಂತಾರದಿoದಲ್ಲಿನ ಸಿಬ್ಬಂಧಿಗಳು ಪ್ರವಾಸಿಗರನ್ನ ಅರ್ಧಕ್ಕೆ ಹೊರಕ್ಕೆ ಕಳಿಸಿದ್ದಾರೆ. ಸ್ದಳಕ್ಕೆ ಬಂದ ಪೊಲೀಸರು ನಾಯಿ ಓಡಿಸುವ ಪ್ರಯತ್ನಸಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನಿಡಲಾಗಿದೆ.