ನಾಗರ ಪಂಚಮಿ ಹಿನ್ನಲೆಯಲ್ಲಿ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ, ನಾಗನಿಗೆ ವಿಶೇಷ ಪೂಜೆ ನೆರವೇರಿದೆ. ನಾಗ ಕ್ಷೇತ್ರವು ವಿಶೇಷವಾಗಿ ಹೂವಿನಿಂದ ಅಲಂಕಾರಗೊಂಡು ಕಂಗೊಳಿಸುತ್ತಿದೆ.
ನಾಗನ ವಿಗ್ರಹಕ್ಕೆ ಹಾಲು,ಸೀಯಾಳ ಅಭಿಷೇಕ ಮಾಡಲಾಗುತ್ತಿದೆ. ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಕುಕ್ಕೆಗೆ ಭೇಟಿ ನೀಡುತ್ತಿದ್ದು, ಹಾಲು, ಸೀಯಾಳಾಭಿಷೇಕ ಮಾಡಿ ಭಕ್ತಾದಿಗಳು ನಾಗಪ್ಪನ ಆಶೀರ್ವಾದಕ್ಕೆ ಪಾತ್ರರಾಗುತ್ತಿದ್ದಾರೆ.