Recent Posts

Monday, January 20, 2025
ಸುದ್ದಿ

ದಮಯಂತಿ ಕೂಜುಗೋಡು ನೀಡಿರುವ ಆರೋಪ ಸುಳ್ಳು: ಮಲೆಕುಡಿಯರ ಸಂಘ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯೆ ದಮಯಂತಿ ಕೂಜುಗೋಡು ನೀಡಿರುವ ಸುಳ್ಳು ಆರೋಪ ಮತ್ತು ಜಾತಿ ನಿಂದನೆ ಬಗ್ಗೆ ಸುಬ್ರಹ್ಮಣ್ಯದ ಮಲೆಕುಡಿಯರ ಸಂಘ ಪತ್ರಿಕಾ ಗೋಷ್ಟಿಯಲ್ಲಿ ದೂರು ನೀಡಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.

ಹಲವು ವಿವಾದಗಳಿಂದ ಹೆಸರಾದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಈಗ ಮತ್ತೋಮ್ಮೆ ಸುದ್ದಿಯಾಗುತ್ತಿದೆ. ಕೆಲವು ದಿನಗಳ ಹಿಂದೆ ಹಿಂದೂ ಯುವ ವಾಗ್ಮಿ ಚೈತ್ರ ಕುಂದಾಪುರ ಹಾಗೂ ಅರುಣ್ ಪುತ್ತಿಲ ಸಮಾರಂಭದಲ್ಲಿ ಮಲೆಕುಡಿಯ ಜನಾಂಗದವರ ಹಕ್ಕುಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಕಸಿದುಕೊಂಡಿರುವ ಬಗ್ಗೆ ಹಾಗೂ ಪೂರ್ವಿಕರು ಆರಾಧಿಸಿಕೊಂಡು ಬಂದಿರುವ ಪೊಸರು ಜಮೀನನ್ನು ದೇವಸ್ಥಾನದ ಆಳಿತ ಮಂಡಳಿ ಅನಧಿಕೃತವಾಗಿ ಸ್ವಾಧೀನ ಪಡಿಸಿಕೊಂಡ ಬಗ್ಗೆ ನೀಡಿದ ಹೇಳಿಕೆ ಈಗ ಮತ್ತೊಮ್ಮೆ ವಿವಾದ ಹುಟ್ಟುಹಾಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು,ಕುಕ್ಕೆ ಶ್ರೀ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿಯ ಸದಸ್ಯೆಯಾಗಿರುವ ದಮಯಂತಿ ಕೂಜುಗೋಡು ಅವರು ಇತರ ಭಕ್ತರ ಹೆಸರು ಬಳಸಿಕೊಂಡು ಸ್ಥಳೀಯ ಮಲೆಕುಡಿಯ ಸಮುದಾಯದವರ ಮೇಲೆ ಬೆದರಿಕೆ ಹಾಗೂ ಜಾತಿ ನಿಂದನೆಯನ್ನು ಚೈತ್ರ ಕುಂದಾಪುರ ಹಾಗೂ ಅರುಣ್ ಪುತ್ತಿಲ ಮಾಡಿರುವುದಾಗಿ ಮಾಧ್ಯಮಕ್ಕೆ ಸುಳ್ಳು ಪ್ರಕಟಣೆ ನೀಡಿದ್ದರು. ಆದರೆ ಈ ಬಗ್ಗೆ ಸ್ವತಃ ಮಲೆಕುಡಿಯ ಜನಾಂಗದವರೇ ಪತಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೇವಸ್ಥಾನ ಆಡಳಿತ ಮಂಡಳಿಯ ಮುಸುಕಿನ ಗುದ್ದಾಟದಲ್ಲಿ ಮಲೆಕುಡಿಕೆ ಜನಾಂಗದವರನ್ನ ಎಳೆದು ತರುವುದು ಎಷ್ಟರ ಮಟ್ಟಿಗೆ ಸರಿ? ಚೈತ್ರ ನೀಡಿದ ಹೇಳಿಕೆಯಲ್ಲಿ ಮಲೆಕುಡಿಯ ಜನಾಂಗದವರನ್ನು ನಿಂದನೆ ಮಾಡುವ ಯಾವುದೇ ಅಂಶಗಳಿಲ್ಲ. ಅಷ್ಟೆಯಲ್ಲದೆ ಕುಕ್ಕೆ ಕ್ಷೇತ್ರದ ಇತಿಹಾಸದ ಭಾಗವಾಗಿರುವ ಮಲೆಕುಡಿಯ ಜನಾಂಗದ ಪಾರಂಪರಿಕ ಹಕ್ಕು ಹಾಗೂ ಪೂರ್ವಿಕರು ಆರಾಧಿಸಿಕೊಂಡು ಬಂದಿರುವ ಪೊಸರು ಜಮೀನನ್ನು ದೇವಸ್ಥಾನದ ಆಳಿತ ಮಂಡಳಿ ಅನಧಿಕೃತವಾಗಿ ಸ್ವಾಧೀನ ಪಡಿಸಿಕೊಂಡಿದೆ ಎಂದು ಮಲೆಕುಡಿಯರ ಸಂಘದ ಅಧ್ಯಕ್ಷರಾದ ತಿಮ್ಮಪ್ಪ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಜಾತಿ ನಿಂದನೆ ಮಾಡಿದ ಸುಳ್ಳು ದೂರು ನೀಡಿದವರ ವಿರುದ್ಧ ಸಂಘದ ವತಿಯಿಂದ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದೆಂದು ಹೇಳಿಕೆ ನೀಡಿದ್ದಾರೆ. ದಮಯಂತಿ ಕೂಜುಗೋಡು ಮಾಡಿರುವ ಆರೋಪದ ಹಿಂದೆ ಕಾಣದ ಕೈಗಳ ಕೈವಾಡವಿದಯೇ ಅಥವಾ ಸ್ವಾರ್ಥದ ಉದ್ದೇಶವಿದೆಯೇ ಅನ್ನುವ ಮಾತುಗಳು ಈಗ ಎಲ್ಲೆಡೆ ಕೇಳಿಬರುತ್ತಿದೆ. ಜಾತಿನಿಂದನೆ ಮಾಡದೆ ಜಾತಿನಿಂದನೆ ಅನ್ನುವ ಕುರಿತು ಹೇಳಿಕೆ ನೀಡಿದ್ದರ ಉದ್ದೇಶವಾದರು ಏನು ಎಂಬ ವಿಚಾರ ಈಗ ಎಲ್ಲೆಡೆ ಹರಿದಾಡುತ್ತಿದ್ದು ದಮಯಂತಿ ಕೂಜುಗೋಡು ಸುಬ್ರಹ್ಮಣ್ಯ ದೇವಸ್ಥಾನ ಅಧಿಕಾರದ ದಾಹದಿಂದ ಈ ರೀತಿಯ ಸುಖಾಸುಮ್ಮನೆ ಆರೋಪಮಾಡಿದದ್ದಾರೆ ಎಂದು ಈಗ ಮಲೆಕುಡಿಯ ಜನಾಂಗದವರೇ ಹೇಳಿಕೆ ನೀಡಿರುವುದು ದಮಯಂತಿಯವರು ಅಧಿಕಾರ ದುರ್ಬಳಕೆ ಮಾಡಿರುವುದಕ್ಕಕೆ ಮತ್ತಷ್ಟು ಪುಷ್ಠು ನೀಡಡಿದೆ. ಒಟ್ಟಿನಲ್ಲಿ ಒಂದಲ್ಲ ಒಂದು ವಿವಾದಗಳಿಂದ ಸುದ್ದಿಯಾಗುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಈಗ ಮತ್ತೊಮ್ಮೆ ಸುದ್ದಿಯಾಗಿದ್ದು ಯಾವ ರೀತಿ ಕೊನೆಗೊಳ್ಳುತ್ತದೆಂದು ಕಾದು ನೋಡಬೇಕಷ್ಟೆ.