Recent Posts

Tuesday, November 26, 2024
ಸುದ್ದಿ

ತುಳುನಾಡಿನಲ್ಲಿ ನಾಗರ ಪಂಚಮಿ ಸಂಭ್ರಮ : ನಾಗಪ್ಪನಿಗೆ ಹಾಲು, ಅರಸಿನ, ತುಪ್ಪ ಜೇನು ಸಿಯಾಳ ಸಮರ್ಪಣೆ – ಕಹಳೆ ನ್ಯೂಸ್

ತುಳುನಾಡಿನಲ್ಲಿ ನಾಗಾರಾಧನೆಗೆ ಬಹಳ ಮಹತ್ವ ಇದೆ. ನಾಗರ ಪಂಚಮಿಯ ನಂತರ ಎಲ್ಲಾ ಹಬ್ಬ ಹರಿದಿನಗಳು ಪ್ರಾರಂಭವಾಗುತ್ತದೆ. ಪ್ರತಿ ವರ್ಷ ಆಷಾಢ ಮಾಸದಲ್ಲಿ ಬರುವ ನಾಗರ ಪಂಚಮಿ ಈ ಬಾರಿ ಶ್ರಾವಣ ಮಾಸದಲ್ಲಿ ಬಂದಿರುವುದು ಕೂಡ ಒಂದು ವಿಶೇಷ.ಕರಾವಳಿ ಜಿಲ್ಲೆ, ಉಡುಪಿಯಲ್ಲಿ ಮುಂಜಾನೆಯಿAದ ಜನ ಶ್ರದ್ಧಾಭಕ್ತಿಯಿಂದ ನಾಗರ ಪಂಚಮಿ ಆಚರಣೆಯಲ್ಲಿ ತೊಡಗಿದ್ದಾರೆ.


ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕುಟುಂಬದ ಮೂಲ ನಾಗಬನದಲ್ಲಿ ನಾಗನ ಕಲ್ಲಿಗೆ ಹಾಲು ಎರೆಯಬೇಕು, ತಂಬಿಲ ನೀಡಬೇಕು ಎಂಬ ಸಂಪ್ರದಾಯ ಹಿಂದಿನಿAದಲೂ ನಡೆದುಕೊಂಡು ಬಂದಿದೆ. ವರ್ಷಕ್ಕೊಂದು ಬಾರಿಯಾದರೂ ಕುಟುಂಬ ಒಟ್ಟಾಗಿ ಮೂಲ ನಾಗನ ಆರಾಧನೆ ಮಾಡುವುದು ಸಂಪ್ರದಾಯ. ಹಾಲು ಅರಸಿನ ತುಪ್ಪ ಜೇನು ಸಿಯಾಳದಿಂದ ನಾಗನ ಕಲ್ಲಿಗೆ ಅಭಿಷೇಕವನ್ನು ಮಾಡಲಾಯಿತು. ಅರಳು ಬೆಲ್ಲ ಹಣ್ಣು ಹೂವುಗಳಿಂದ ನಾಗನ ಕಲ್ಲನ್ನು ಸಿಂಗಾರ ಮಾಡಲಾಯ್ತು. ಅಡಿಕೆ ಹಿಂಗಾರವನ್ನು ಇಂದು ವಿಶೇಷವಾಗಿ ನಾಗದೇವರಿಗೆ ಅರ್ಪಣೆ ಮಾಡಲಾಗುತ್ತದೆ. ಸಾರ್ವಜನಿಕ ನಾಗಬನ ದೇವಸ್ಥಾನಗಳಲ್ಲಿರುವ ನಾಗಬನ ಕುಟುಂಬದ ಮತ್ತು ಮನೆಗಳಲ್ಲಿರುವ ನಾಗಬನಗಳಲ್ಲಿ ಜನ ಇವತ್ತು ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿಸಿದ