Recent Posts

Monday, January 27, 2025
ಸುದ್ದಿ

ಸಂಪಿಗೆ ಮರದಲ್ಲಿ ನಾಗನ ಹೆಡೆ..! : ಉಡುಪಿಯ ಮಠದಬೆಟ್ಟುವಿನಲ್ಲಿ ಕೌತುಕ –ಕಹಳೆ ನ್ಯೂಸ್

ಸಾರ್ವಜನಿಕ ನಾಗಾಲಯದಲ್ಲಿ ನಡೆದ ಕೌತುಕವೊಂದು ನಾಗರಪಂಚಮಿಯ ಸಂದರ್ಭ ಬೆಳಕಿಗೆ ಬಂದಿದೆ. ಉಡುಪಿಯ ಮಠದಬೆಟ್ಟು ಪರಿಸರದಲ್ಲಿ ಒಂದು ಸಾರ್ವಜನಿಕ ನಾಗಬನ ಇದೆ. ಸುಮಾರು 10 ವರ್ಷಗಳ ಹಿಂದೆ ಇಲ್ಲಿ ಸಂಪಿಗೆ ಗಿಡವನ್ನ ನೆಡಲಾಗಿತ್ತು.

ಸಂಪಿಗೆ ಮರದ ಕಾಂಡದಲ್ಲಿ ನಾಗನ ಹೆಡೆಯನ್ನ ಹೋಲುವ ಆಕಾರ ಸೃಷ್ಟಿಯಾಗಿದೆ. ನಾಗರಪಂಚಮಿಯ ಸಂದರ್ಭ ತನು ತಂಬಿಲ ಅರ್ಪಿಸಲು ಬರುವ ಭಕ್ತರನ್ನು ಇದು ಸೆಳೆಯುತ್ತಿದೆ. ಮರದ ಕಾಂಡದಲ್ಲಿ ಮೂಡಿದ ಆಕಾರಕ್ಕೆ ಹೂವಿನ ಹಾರವನ್ನು ಅರ್ಪಿಸಿದ್ದಾರೆ. ಮರದಲ್ಲಿ ಮೂಡಿದ ನಾಗನ ಹೆಡೆ ನಾಗಬನದ ಕಡೆಗೆ ಇರುವುದು ಮತ್ತೊಂದು ವಿಶೇಷ.ಪ್ರತಿ ವರ್ಷ ಮರ ಬೆಳೆದಂತೆ ಹೆಡೆಯ ಆಕಾರ ಕೂಡ ಬೆಳೆಯುತ್ತಿದೆ ಎಂದು ಸ್ಥಳೀಯ ವ್ಯಾಪಾರಿ ಸುಕುಮಾರ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು