Sunday, January 26, 2025
ಸುದ್ದಿ

ಯಾವುದೇ ಭಯವಿಲ್ಲದೆ ಭಯಾನಕ ಹಾವುಗಳನ್ನ ಛಾವಣಿಯಿಂದ ಹೊರತೆಗೆದ ಯುವತಿ..! – ಕಹಳೆ ನ್ಯೂಸ್

ಅನೇಕರು ಹಾವನ್ನ ನೋಡಿದ್ರೆ ದೂರ ಓಡುತ್ತಾರೆ. ಅದ್ರಲ್ಲೂ ಹೆಣ್ಣು ಮಕ್ಕಳಿಗೆ ಹಾವಿನ ಬಗ್ಗೆ ಸ್ವಲ್ಪ ಜಾಸ್ತಿನೆ ಭಯ ಇರುತ್ತದೆ. ಆದರೆ ಇಲ್ಲೊಬ್ಬಳು ಯುವತಿ ಮನೆಯ ಛಾವಣಿಯೊಳಗೆ ಅಡಗಿರುವ ಎರಡು ದೊಡ್ಡ ಹಾವುಗಳನ್ನು ಯಾವುಇದೇ ಆತಂಕವಿಲ್ಲದೆ ಆರಾಮವಾಗಿ ಹೊರತೆಗೆದಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಷಕಾರಿ ಹಾವಿನನ್ನ ಹೊರಗೆ ತೆಗೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವತಿ ಮೇಜಿನ ಮೇಲೆ ಹತ್ತಿ ಹಾವುಗಳನ್ನು ಕೋಲಿನಿಂದ ಹೊರತೆಗೆಯಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಒಂದು ಹಾವು ಹೊರಬರುತ್ತಿದ್ದಂತೆ ಒಂದರ ಹಿಂದೆ ಇನ್ನೊಂದು ಹಾವು ಹೊರಬಂದಿದೆ. ಯುವತಿ ಎರಡು ಹಾವುಗಳನ್ನ ಆರಾಮವಾಗಿ ಕೈಯಲ್ಲಿ ಹಿಡಿದುಕೊಂಡಿದ್ದಾಳೆ. ಈ ವಿಡಿಯೋ ನೋಡಿದ ಜನ ಬಗೆಬಗೆಯಾಗಿ ಜಕಮೆಂಟ್ ಮಾಡಿದ್ದಾರೆ. ಆಕೆಯ ಧೈರ್ಯಕ್ಕೆ ಭೇಶ್ ಅಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು