Saturday, January 25, 2025
ಸುದ್ದಿ

ಇದು ಕೊರಿಯ ಪ್ರೇಮಕಥೆ : ಪ್ರಿಯತಮನಿಗಾಗಿ ಭಾರತಕ್ಕೆ ಬಂದ ಯುವತಿ –ಕಹಳೆ ನ್ಯೂಸ್

ಪ್ರೀತಿಯ ಬಲೆಯಲ್ಲಿ ಬಿದ್ದ ಪ್ರೇಮಿಗಳು ಯಾವುದೇ ಸಹಾಸಕ್ಕೋ ತಯಾರಾಗರ‍್ತಾರೆ. ಯಾರನ್ನ ಬೇಕಾದ್ರು ಬಿಟ್ಟು ಬದುಕೋದಿಕ್ಕೆ ಸಿದ್ದರಾಗರ‍್ತಾರೆ ಅನ್ನೋ ಮಾತುಗಳು ಕೆಲ ಘಟನೆಗಳನ್ನ ನೋಡಿದ್ರೆ ನಿಜ ಅನ್ನಿಸುತ್ತೆ.. ಇಲ್ಲೊಬ್ಬಳು ಪ್ರಿಯತಮೆ ತನ್ನ ಪ್ರಿಯಕರನಿಗಾಗಿ ಕೊರಿಯಾದಿಂದ ಭಾರತಕ್ಕೆ ಬಂದಿದ್ದಾಳೆ ನೋಡಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಉತ್ತರಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸುಖ್‌ಜಿತ್ ಸಿಂಗ್ 4 ವರ್ಷಗಳ ಹಿಂದೆ ಉದ್ಯೋಗ ಅರಸಿ ದಕ್ಷಿಣ ಕೊರಿಯಾಕ್ಕೆ ತೆರಳಿದ್ದ. ಆಗ ಕಾಫಿ ಶಾಪ್‌ನಲ್ಲಿ ಕೆಲಸ ಮಾಡುವಾಗ ಕಿಂಮ್ ಬೋಹ್ ನಿ ಪರಿಚಯವಾಗಿದ್ದಳು. ಇಬ್ಬರ ಮಧ್ಯೆ ಪ್ರೀತಿಯಾಗಿತ್ತು. 6 ತಿಂಗಳ ಹಿಂದೆ ಸುಖಜಿತ್ ಭಾರತಕ್ಕೆ ಮರಳಿದ್ದ. ಈ ನಡುವೆ ಇಬ್ಬರ ಮಧ್ಯೆ ಸಂಪರ್ಕವಿತ್ತು. ಹಾಗೂ ಮದುವೆ ಆಗಲು ನಿರ್ಧರಿಸಿದ್ದರು. ಅದರಂತೆ ಸುಖ್‌ಜಿತ್ ಸಿಂಗ್‌ಗಾಗಿ ಕಿಂಮ್ ಬೋಹ್ ನಿ ದಕ್ಷಿಣ ಕೊರಿಯಾದಿಂದ ಭಾರತಕ್ಕೆ ಬಂದಿದ್ದಾಳೆ. ಪಂಜಾಬಿ ಸಂಪ್ರದಾಯದAತೆ ವಿವಾಹವಾಗಿದ್ದಾರೆ. ಸದ್ಯ ಈ ಜೋಡಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅನೇಕರು ಇವರಿಬ್ಬರ ಫೋಟೋ ನೋಡಿ ಶುಭಾಶಯ ಕೋರುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು