Friday, January 24, 2025
ಸುದ್ದಿ

ಭಾರತದಲ್ಲಿ ಯುಪಿಐ ಮೂಲಕ ತರಕಾರಿ ಹಣ ಪಾವತಿಸಿದ ಜರ್ಮನ್ ಸಚಿವ-ಕಹಳೆ ನ್ಯೂಸ್

ನವದೆಹಲಿ: ಜರ್ಮನ್ ಸಚಿವ ವೋಲ್ಕರ್ ವಿಸ್ಸಿಂಗ್ ಅವರು ಭಾರತದ ಯುಪಿಐ ತಂತ್ರಜ್ಞಾನ ಬಳಸಿ ಹಣ ಪಾವತಿಗೆ ಭಾರತದ ಜರ್ಮನ್ ರಾಯಭಾರಿ ಕಚೇರಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜರ್ಮನಿಯ ತಂತ್ರಜ್ಞಾನ ಹಾಗೂ ಸಾರಿಗೆ ಸಚಿವ ವೋಲ್ಕರ್ ವಿಸ್ಸಿಂಗ್ ಅವರು ಭಾರತದಲ್ಲಿ ಯುಪಿಐ ತಂತ್ರಜ್ಞಾನ ಬಳಸಿ ರಸ್ತೆ ಬದಿಯ ತರಕಾರಿ ಅಂಗಡಿಯಲ್ಲಿ ಹಣ ಪಾವತಿ ಮಾಡಿದ್ದಾರೆ.
ಈ ಬೆನ್ನಲ್ಲೇ ಭಾರತದ ಡಿಜಿಟಲ್ ಮೂಲಸೌಕರ್ಯವನ್ನು ಭಾರತದ ಜರ್ಮನ್ ರಾಯಭಾರಿ ಕಚೇರಿ ಶ್ಲಾಘಿಸಿದೆ. ಇದು ಭಾರತದ ಯಶಸ್ಸಿನ ಕಥೆಗಳಲ್ಲಿ ಒಂದು ಎಂದು ರಾಯಭಾರಿ ಕಚೇರಿ ಮೆಚ್ಚುಗೆ ವ್ಯಕ್ತಪಡಿಸಿದೆ .

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಎಕ್ಸ್ನಲ್ಲಿ (ಟ್ವಿಟ್ಟರ್) ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊAಡಿರುವ ಜರ್ಮನ್ ರಾಯಭಾರಿ ಕಚೇರಿ, ”ಭಾರತ ಯಶಸ್ಸಿನ ಕಥೆಗಳಲ್ಲಿ ಡಿಜಿಟಲ್ ಮೂಲಸೌಕರ್ಯವೂ ಒಂದು. ಯುಪಿಐ ತಂತ್ರಜ್ಞಾನದ ಮೂಲಕ ಎಲ್ಲರೂ ಕೆಲವೇ ಸೆಕೆಂಡ್‌ಗಳಲ್ಲಿ ವಹಿವಾಟು ನಡೆಸಲು ಸಾಧ್ಯವಾಗುತ್ತಿದೆ. ಸಚಿವ ವಿಸ್ಸಿಂಗ್ ಅವರಿಗೆ ಮೊದಲ ಬಾರಿಗೆ ಯುಪಿಐ ಪಾವತಿಯ ಅನುಭವವಾಯಿತು. ಇದು ತುಂಬಾ ಆಕರ್ಷಕವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಎಕ್ಸ್ನಲ್ಲಿ ಹಂಚಿಕೊAಡಿರುವ ವಿಡಿಯೋದಲ್ಲಿ ಜರ್ಮನ್ ಸಚಿವ ವಿಸ್ಸಿಂಗ್ ಅವರು ತರಕಾರಿ ವ್ಯಾಪಾರಿಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಬಳಸಿ ಹಣ ಪಾವತಿ ಮಾಡುವುದನ್ನು ಕಾಣಬಹುದು.

ಉ೨೦ ಸಭೆಯಲ್ಲಿ ಭಾಗವಹಿಸಲು ಜರ್ಮನ್ ಸಚಿವ ವೋಲ್ಕರ್ ವಿಸ್ಸಿಂಗ್ ಅವರು ಆಗಸ್ಟ್ ೧೮ರಂದು ಬೆಂಗಳೂರಿನಲ್ಲಿ ಆಗಮಿಸಿದ್ದರು. ಬಳಿಕ ಆಗಸ್ಟ್ ೧೯ರಂದು ಇಲ್ಲಿ ನಡೆದ ಜಿ೨೦ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ ಮಾಡಿದ್ದ ರಾಯಭಾರಿ ಕಚೇರಿ, ಬೆಂಗಳೂರಿನಲ್ಲಿ ಜಿ೨೦ ಸಭೆ ನಡೆಯಲಿದೆ. ಇಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ಜರ್ಮನ್ ಸಚಿವ ವೋಲ್ಕರ್ ವಿಸ್ಸಿಂಗ್ ಅವರು ಭಾರತ ಮತ್ತು ಜರ್ಮನ್ ನಡುವಿನ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಇದರ ಜೊತೆಗೆ ಡಿಜಿಟಲ್ ಕ್ಷೇತ್ರದಲ್ಲಿ, ಮುಖ್ಯವಾಗಿ ಕೃತಕ ಬುದ್ಧಿಮತ್ತೆ ಬಗ್ಗೆ ಉಭಯ ರಾಷ್ಟ್ರಗಳ ಸಹಕಾರದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಈ ಮೊದಲು ತಿಳಿಸಿತ್ತು.
ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಅಥವಾ ಯುಪಿಐ (UPI) ಭಾರತದ ಮೊಬೈಲ್ ಆಧಾರಿತ ವೇಗದ ಹಣ ಪಾವತಿ ವ್ಯವಸ್ಥೆಯಲ್ಲಿ ಒಂದಾಗಿದೆ. ಇದು ಗ್ರಾಹಕರ ವರ್ಚುವಲ್ ಪಾವತಿ ವಿಳಾಸವನ್ನು (ಗಿPಂ) ಬಳಸಿಕೊಂಡು ಕಾರ್ಯ ನಿರ್ವಹಿಸುತ್ತದೆ. ಈ ಮೂಲಕ ಗ್ರಾಹಕರು ತ್ವರಿತವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹಣ ಪಾವತಿ ಮಾಡಲು ಅನುಕೂಲವಾಗುತ್ತದೆ.
ಶ್ರೀಲಂಕಾ, ಫ್ರಾನ್ಸ್, ಯುಎಇ ಮತ್ತು ಸಿಂಗಾಪುರ ಮುಂತಾದ ದೇಶಗಳು ಪಾವತಿ ತಂತ್ರಜ್ಞಾನದಲ್ಲಿ ಭಾರತದೊಂದಿಗೆ ಪಾಲುದಾರಿಕೆ ಹೊಂದಿದೆ. ಯುಪಿಐ ತಂತ್ರಜ್ಞಾನವನ್ನು ಬಳಸಲು ಭಾರತ ಮತ್ತು ಫ್ರಾನ್ಸ್ ಒಪ್ಪಂದ ಮಾಡಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ವಿದೇಶ ಪ್ರವಾಸದಲ್ಲಿ ಹೇಳಿದ್ದರು.