Thursday, January 23, 2025
ಸುದ್ದಿ

ನಿನ್ನ ರೇಟ್ ಎಷ್ಟು? : ವಿಮಾನದಲ್ಲಿ ಗಗನಸಖಿ ಮೈಮೇಲೆ ಕೈ ಹಾಕಿದ ಕಮಂಗಿ..!? – ಕಹಳೆ ನ್ಯೂಸ್

ಮಾಲ್ಡೀವ್ಸ್  ನಿಂದ ಬೆಂಗಳೂರಿಗೆ ಬರ್ತಿದ್ದ ಅಕ್ರಂ ಅಹ್ಮದ್ ಎಂಬಾತ ವಿಮಾನದಲ್ಲಿ ಗಗನಸಖಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ಕೊಟ್ಟ ಬಗ್ಗೆ ದೇವನಹಳ್ಳಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಲ್ಡೀವ್ಸ್  ನಿಂದ ಬೆಂಗಳೂರಿಗೆ ಬರ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ್ದ ವಿದೇಶಿ ಪ್ರಜೆಯನ್ನು ಅರೆಸ್ಟ್ ಮಾಡಲಾಗಿದೆ.

ಮಾಲ್ಡೀವ್ಸ್  ನಿಂದ ಬೆಂಗಳೂರಿಗೆ ಬ್ಯುಸಿನೆಸ್ ವೀಸಾದಲ್ಲಿ ಪ್ರಯಾಣ ಮಾಡುತ್ತಿದ್ದ ಅಕ್ರಂ ಅಹ್ಮದ್ ದುರ್ವರ್ತನೆ ತೋರಿದ್ದು, ಕುಳಿತಿದ್ದ ಸೀಟ್ ಬಳಿ ಗಗನಸಖಿ ನಡೆದು ಹೋಗುವಾಗ ಮೈಮೇಲೆ ಕೈ ಹಾಕಿದ ಎಂದು ಆರೋಪಿಸಲಾಗಿದೆ. ಅಲ್ಲದೆ ಗಗನಸಖಿಗೆ ನಿನ್ನ ರೇಟ್ ಎಷ್ಟು? ಎಷ್ಟು ಡಾಲರ್ ಕೊಟ್ರೆ ನೀನು ಬರ್ತಿಯಾ..? ಎಂದು ಕೇಳಿದ್ದಾನೆ. ನೂರು ಡಾಲರ್ ಕೊಟ್ರೆ ಸಾಕಾ ಇನ್ನು ಬೇಕಾ..? ಎಂದೆಲ್ಲಾ ಕೇಳಿದ್ದಾನೆ ಎಂದು ಗಗನಸಖಿ ದೂರಿದ್ದಾಳೆ. ಗಗನಸಖಿಯ ದೂರಿನ ಅನ್ವಯ ದೇವನಹಳ್ಳಿ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಪೊಲೀಸರು ವಿಚಾರಣೆ ನಡೆಸಿದ್ದಾರೆ.