Thursday, January 23, 2025
ಸುದ್ದಿ

ಹಾವು, ಹುತ್ತಕ್ಕೆ ಹಾಲೆರೆಯಬೇಡಿ, ಹಾಲು ಹಣ್ಣು ಆಹಾರವಾಗಿ ಉಪಯೋಗಿಸಿ : ವಿದ್ಯಾರ್ಥಿಗಳ ಕ್ಯಾಂಪೇನ್ – ಕಹಳೆ ನ್ಯೂಸ್

ನಾಡಿನೆಲ್ಲಡೆ ಶ್ರದ್ಧಾ ಭಕ್ತಿಯಿಂದ ನಾಗರ ಪಂಚಮಿಯನ್ನ ಆಚರಿಸಲಾಗುತ್ತಿದೆ. ಭೂಲೋಕದಲ್ಲಿ ಕಣ್ಣಿಗೆ ಕಾಣುವ ದೇವರಾದ ನಾಗನಿಗೆ ನಾಗರ ಪಂಚಮಿಯ ಪುಣ್ಯ ದಿನವಾದ ಇವತ್ತು ಅಬಿಷೇಕ ಅರ್ಪಿಸಲಾಗುತ್ತಿದೆ. ಆದ್ರೆ ಹಬ್ಬದ ಹೆಸರಿನಲ್ಲಿ ಸಂಭ್ರಮ ಸರಿ, ಮೌಡ್ಯ ಮತ್ತು ಆಹಾರ ವಸ್ತುಗಳ ವ್ಯರ್ಥ ಮಾಡುವುದು ಯಾರಿಗೂ ಉಪಯೋಗವಿಲ್ಲ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮೌಢ್ಯರಹಿತ, ಹಸಿವು ಮುಕ್ತ ಸಮಾಜ ನಿರ್ಮಿಸುವ ಭಾಗವಾಗಿ ಕ್ಯಾಂಪೇನ್‌ವೊಂದು ಶುರು ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರು ವಿವಿಯ ಪತ್ರಿಕೋದ್ಯಮ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿ ಮನೋಜ್ ಹಾಗೂ ಈತನ ಸ್ನೇಹಿತರು ಫೇಸ್‌ಬುಕ್‌ನಲ್ಲಿ ಲೈವ್‌ವೊಂದು ಮಾಡಿದ್ದಾರೆ. ಲೈವ್‌ನಲ್ಲಿ ಮಾತಾಡಿದ ಮನೋಜ್, ನಾಗರ ಪಂಚಮಿ ಒಂದು ಹಬ್ಬವಾಗಿ ಆಚರಿಸಿ. ಆದರೆ ಹಾವು ಅಥವಾ ಹುತ್ತಕ್ಕೆ ಹಾಲೆರೆಯಬೇಡಿ. ಬದಲಿಗೆ ಅದೇ ಹಾಲು ಹಣ್ಣುಗಳನ್ನು ದಯವಿಟ್ಟು ಆಹಾರವಾಗಿ ಉಪಯೋಗಿಸಿ. ಹಸಿದವರಿಗೆ ದಾನ ಮಾಡಿ. ಇದರಿಂದ ನಾಗರ ಪಂಚಮಿ ಒಂದು ಹಸಿವು ನಿವಾರಣೆ ಹಬ್ಬವಾಗಲಿದೆ ಎಂದು ಸಂದೇಶ ಸಾರಿದ್ದಾರೆ.

ಅಲ್ಲದೇ ಹುತ್ತಕ್ಕೆ ಅರ್ಪಿಸಲಾಗಿದ್ದ ಆಹಾರ ಪದಾರ್ಥಗಳು, ಬಾಳೆಹಣ್ಣು ಸೇರಿದಂತೆ ಹಂಚಿಕೊಂಡು ತಿಂದು ಒಂದು ಸಮಾಜದ ನಿಜವಾದ ಆತ್ಮ ಅಡಗಿರುವುದು ಧರ್ಮದಿಂದಲ್ಲ, ಬದಲಿಗೆ ವಿಜ್ಞಾನದಿಂದ ಮತ್ತು ಪ್ರಕೃತಿಯ ಸಹಜ ನಿಯಮದಿಂದ, ಹಾವು ಸೇವಿಸುತ್ತದೆ ಎಂದು ಕಲ್ಲಿನ ಮೇಲೆ ಸುರಿದು ಹಾಲನ್ನು ಅಪವ್ಯಯ ಮಾಡುವುದರ ಬದಲು ಸಮಾಜದಲ್ಲಿರೋ ಬಡ ಮಕ್ಕಳಿಗೆ ವಿತರಿಸಿ ಎಂದು ಹೇಳಿದ್ದಾರೆ.

ಈ ವಿಚಾರಕ್ಕೆ ಕೆಲವರು ಸರಿ ಅಂದ್ರೆ. ಇನ್ನು ಆಚಾರ ವಿಚಾರಗಳನ್ನ ನಂಬಿಕೊಂಡು ಬರುವ ಜನತೆ ಈ ವಿಚಾರವನ್ನ ಬಲವಾಗಿ ಖಂಡಿಸಿದ್ದಾರೆ.