Thursday, January 23, 2025
ಸುದ್ದಿ

ಕೃಷ್ಣಾ ನದಿಯಲ್ಲಿ ನೀರುಪಾಲದ ಯುವಕ : ಇಬ್ಬರನ್ನ ರಕ್ಷಿಸಿದ ಸ್ಧಳೀಯರು –ಕಹಳೆ ನ್ಯೂಸ್

ಕೃಷ್ಣಾ ನದಿಯಲ್ಲಿ ಯುವಕನೋರ್ವ ನೀರುಪಾಲಾಗಿರೋ ಘಟನೆ ಕುಡಚಿ ಪಟ್ಟಣ ಹೊರ ವಲಯದ ಗಡ್ಡೆಯಲ್ಲಿ ಸಂಭವಿಸಿದೆ. ಬೆಳಗಾವಿ ನಗರದ ಗಾಂಧಿ ನಗರ ನಿವಾಸಿ ಹುಸೇನ್ ಅರಕಟ್ಟೆ ನೀರು ಪಾಲಾದ ಯುವಕ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆ ರಜೆ ಇದ್ದ ಕಾರಣ ಕುಟುಂಬ ಸಮೇತ ಮೂವರು ಯುವಕರು ಗಡ್ಡೆಯ ದರ್ಗಾಗೆ ತೆರಳಿದ್ದರು. ಹೀಗಾಗಿ ಮನೆಗೆ ಹೋಗುವ ಮೊದಲು ಮೂವರು ಯುವಕರು ನದಿ ದಡದಲ್ಲಿ ಕುಳಿತುಕೊಂಡಿದ್ದರು. ಇದೇ ವೇಳೆ ಆಕಸ್ಮಿಕವಾಗಿ ಆಯಾ ತಪ್ಪಿ ಹುಸೇನ್ ಕಾಲು ಜಾರಿ ನೀರು ಪಾಲಾಗಿದ್ದಾನೆ. ಅಲ್ಲೇ ಕುಳಿತುಕೊಂಡಿದ್ದ ಯುವಕರು ಕೂಡ ನೀರಿನಲ್ಲಿ ಜಾರಿ ಬಿದ್ದಿದ್ದಾರೆ.

ಇದನ್ನು ನೋಡ ನೋಡುತ್ತಿದ್ದಂತೆ ಸ್ಥಳೀಯರು ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕುಡಚಿ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಹುಸೇನ್‌ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.