Thursday, January 23, 2025
ಸುದ್ದಿ

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ವಿಚಾರಣೆ -ಹೊಸ ಪೀಠ ರಚನೆ -ಸುಪ್ರೀಂಕೋರ್ಟ್ ಹೇಳಿಕೆ-ಕಹಳೆ ನ್ಯೂಸ್

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ಮನವಿಯನ್ನು ಆಲಿಸಲು ಇಂದೇ ವಿಚಾರಣಾ ಪೀಠವನ್ನು ರಚಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಗಸ್ಟ್ ತಿಂಗಳ ನದಿ ನೀರಿನ ಪಾಲನ್ನು ಬಿಡುಗಡೆ ಮಾಡುವಲ್ಲಿ ಕರ್ನಾಟಕ ವಿಳಂಬ ಮಾಡಿದ ಹಿನ್ನೆಲೆ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇದರ ವಿರುದ್ಧ ಕರ್ನಾಟಕ ಸರ್ಕಾರ ಇಂದೇ ಸುಪ್ರೀಂಗೆ ಅರ್ಜಿ ಸಲ್ಲಿಸಲಿದೆ ಎಂದು ತಿಳಿದುಬಂದಿದೆ.ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಪೀಠದ ಮುಂದೆ ತಮಿಳುನಾಡು ಪರ ವಾದ ಮಂಡಿಸಿದ ಮಾಜಿ ಅಟಾರ್ನಿ ಜನರಲ್, ಹಿರಿಯ ವಕೀಲ ಮುಕುಲ್ ರೋಹಟಗಿ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಮಿತ್ ಆನಂದ್ ತಿವಾರಿ ಅವರು ಇದು ತುರ್ತು ಮನವಿಯಾಗಿದೆ. ಅರ್ಜಿಯನ್ನು ತಕ್ಷಣಕ್ಕೆ ವಿಚಾರಣೆ ನಡೆಸಬೇಕು ಎಂದು ಕೋರಿದರು.ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಪ್ರಕಾರ ಆಗಸ್ಟ್ಗೆ ಕಾವೇರಿ ನೀರನ್ನು ಬಿಡುಗಡೆ ಮಾಡಬೇಕಿದೆ. ಈ ಬಗ್ಗೆ ತುರ್ತು ವಿಚಾರಣೆ ನಡೆಸಬೇಕಿದೆ. ಹೀಗಾಗಿ ಪೀಠವನ್ನು ರಚಿಸಬೇಕು. ಕೊನೆಯದಾಗಿ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ಅವರ ನೇತೃತ್ವ ಪೀಠ ವಿಚಾರಣೆ ನಡೆಸಿತ್ತು ಎಂದು ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ವಾದ ಮಂಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಚಂದ್ರಚೂಡ್ ಇಂದೇ ವಿಚಾರಣಾ ಪೀಠ ರಚಿಸುವುದಾಗಿ ಹೇಳಿದರು.
ತಮಿಳುನಾಡು ವಾದವೇನು?: ನದಿ ನೀರು ಹಂಚಿಕೆಯಲ್ಲಿ ಬಾಕಿ ಉಳಿದಿರುವ ನೀರಿನಲ್ಲಿ ಆಗಸ್ಟ್ ತಿಂಗಳಲ್ಲಿ ೨೪ ಸಾವಿರ ಕ್ಯೂಸೆಕ್ ನೀರನ್ನು ಹರಿಸಬೇಕು. ಬಿಳಿಗುಂಡ್ಲು ಜಲಾಶಯದಿಂದ ತಕ್ಷಣವೇ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ತಮಿಳುನಾಡು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ.
ಬೆಳೆದು ನಿಂತಿರುವ ಬೆಳೆಗಳ ಉಳಿವಿಗಾಗಿ ನೀರು ಬಿಡುವುದು ತೀರಾ ಅನಿವಾರ್ಯವಾಗಿದೆ. ಕಾವೇರಿ ನ್ಯಾಯಮಂಡಳಿ ತೀರ್ಪು ಪ್ರಕಾರ ೨೦೨೩ ರ ಸೆಪ್ಟೆಂಬರ್ ವೇಳೆಗೆ ನಿಗದಿತ ೩೬.೭೬ ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ನಿರ್ದೇಶಿಸಲೂ ತಮಿಳು ಸರ್ಕಾರ ಒತ್ತಾಯಿಸಿದೆ. ಪ್ರಸಕ್ತ ನೀರಾವರಿ ವರ್ಷದಲ್ಲಿ ಜೂನ್ ೧ ರಿಂದ ಜುಲೈ ೩೧ ರವರೆಗಿನ ಅವಧಿಯಲ್ಲಿ ಕರ್ನಾಟಕವು ೨೮.೮೪೯ ಟಿಎಂಸಿ ನೀರಿನ ಕೊರತೆಯನ್ನು ಸರಿದೂಗಿಸಬೇಕು ಎಂದೂ ಕೋರಿದೆ.
ಇಂದು ಸುಪ್ರೀಂಗೆ ಕರ್ನಾಟಕ ಅರ್ಜಿ: ಈ ಬಾರಿಯ ಮುಂಗಾರುಮಳೆ ಕೊರತೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಹೀಗಾಗಿ ನಿಗದಿತ ನೀರನ್ನು ಹಂಚಿಕೆ ಮಾಡಲು ಕರ್ನಾಟಕ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕಾರಣ, ಕರ್ನಾಟಕ ಸರ್ಕಾರ ಕೂಡ ಇದರ ವಿರುದ್ಧ ಮತ್ತು ವಸ್ತುಸ್ಥಿತಿಯ ಬಗ್ಗೆ ವಿವರಿಸಲು ಅರ್ಜಿ ಸಲ್ಲಿಸಲಿದೆ.