Monday, November 25, 2024
ಸುದ್ದಿ

ಲೋಕಾಯುಕ್ತ ದಾಳಿ : ಸರ್ವೆ ಸೂಪರ್ ವೈಸರ್ ಮನೆಯಲ್ಲಿ ಕೋಟ್ಯಾಂತರ ಆಸ್ತಿ ಪತ್ತೆ..! – ಕಹಳೆ ನ್ಯೂಸ್

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಸರ್ವೆ ಸೂಪರ್ ವೈಸರ್ ಕೆ.ಟಿ ಶ್ರೀನಿವಾಸ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರು, ತುಮಕೂರು ಸೇರಿದಂತೆ 14 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆ ಕೋಟ್ಯಾಂತರ ಆಸ್ತಿ ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಕೆ.ಟಿ ಶ್ರೀನಿವಾಸ್ ಮೂರ್ತಿ ಕೆಆರ್ ಪುರಂ ತಾಲೂಕು ಕಚೇರಿಯಲ್ಲಿ ಸರ್ವೆ ಸೂಪರ್ ವೈಸರ್ ಆಗಿದ್ದು, 5ಕ್ಕೂ ಹೆಚ್ಚು ಅಬಕಾರಿ ಲೈಸೆನ್ಸ್ ಹೊಂದಿದ್ದರು. ಹೀಗಾಗಿ ಅವರ ಅಂಧ್ರಳ್ಳಿ ನಿವಾಸ, ಸಹೋದರಿಯ ಹೆಣ್ಣೂರು ನಿವಾಸ, ಸಹೋದರನ ತುಮಕೂರಿನ ನಿವಾಸ, ಪತ್ನಿ ಹೆಸರಿನಲ್ಲಿ ಹೋಟೆಲ್ಸ್, ಬೋರ್ಡಿಂಗ್ ಹೌಸ್‌ಗಳ ಮೇಲೂ ದಾಳಿ ಮಾಡಿ ಪರಿಶೀಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀನಿವಾಸ್ ಓರ್ವರಿಗೆ ಸೇರಿದ 5 ಲಿಕ್ಕರ್ ಲೈಸೆನ್ಸ್ ಬೆಳಕಿಗೆ ಬಂದಿದ್ದು, ಪ್ರಾಥಮಿಕ ತನಿಖೆಯಲ್ಲಿ ಕೋಟ್ಯಾಂತರ ಆಸ್ತಿ ಪತ್ತೆಯಾಗಿದೆ. ಇನ್ನು 2.86 ಕೋಟಿ ದಾಳಿ ಮುಂಚೆಯೇ ಪತ್ತೆಯಾಗಿದೆ.

ಇದರ ಜೊತೆಗೆ ಹೆಣ್ಣೂರು ಸಮೀಪ 83 ಲಕ್ಷ ಮೌಲ್ಯದ 50ಘಿ40 ಅಡಿ ವಿಸ್ತೀರ್ಣ ನಿವೇಶನ. 60 ಲಕ್ಷ ಮೌಲ್ಯದ ನಿರ್ಮಾಣ ಹಂತದ ಕಟ್ಟಡ. ಕೊತ್ತನೂರು ಬಳಿ 10 ಲಕ್ಷ ಮೌಲ್ಯದ 30ಘಿ32 ಅಡಿ ವಿಸ್ತೀರ್ಣ ನಿವೇಶನ ಪತ್ತೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.