Thursday, January 23, 2025
ಸುದ್ದಿ

ಕುಂದಾಪುರ ತಹಶೀಲ್ದಾರ್ ಕಚೇರಿ ಎದುರು ಪುರಸಭಾ ವ್ಯಾಪ್ತಿಯ ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ – ಕಹಳೆ ನ್ಯೂಸ್

ಕುಂದಾಪುರ: ಕುಂದಾಪುರ ತಹಶೀಲ್ದಾರ್ ಕಚೇರಿ ಎದುರು ಪುರಸಭಾ ವ್ಯಾಪ್ತಿಯ ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ, ಸಿಐಟಿಯು ಮುಖಂಡ ಎಚ್ ನರಸಿಂಹ ಬಿಜೆಪಿ ಸರಕಾರ ಕಿಟ್ ಖರೀದಿಗೆ ಮಂಡಳಿ ಸಾವಿರಾರು ಕೋಟಿ ಖರ್ಚಾಗಿ ಶೈಕ್ಷಣಿಕ ಧನಸಹಾಯ ಬಿಡುಗಡೆ ಹಣ ಇಲ್ಲದಂತಾಗಿದೆ. ಕಟ್ಟಡ ಸೆಸ್ ಸಂಗ್ರಹ ಸರಿಯಾಗಿ ಸಂಗ್ರಹ ಮಾಡಲು ಮುಂದಾಗುತ್ತಿಲ್ಲ. ಖರೀದಿ ಪಾರದರ್ಶಕವಾಗಿಲ್ಲ ಇದರ ವಿರುದ್ಧ ಸರಕಾರ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆ ಆಗಬೇಕು. ಕಾರ್ಮಿಕರ ಹಣ ಅನ್ಯ ಉದ್ದೇಶಗಳಿಗೆ ಬಳಸಬಾರದು ಆ.24 ರಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಕಲ್ಲಾಗರ, ಮಹಾಬಲ ವಡೇರಹೋಬಳಿ ಸುಧೀರ್, ರಾಘವೇಂದ್ರ, ಸಂತೋಷ ಡಿ,ರಾಜ ಬಿಟಿಆರ್, ಸಂಪತ್, ನರಸಿಂಹ ಬದಿಮನೆ, ಮತ್ತಿತ್ತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು