Sunday, November 24, 2024
ಪುತ್ತೂರುರಾಜಕೀಯಸುದ್ದಿ

ಬಡಗನ್ನೂರು ವಲಯದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕ ಅಶೋಕ್ ಕುಮಾರ್ ರೈ – ಕಹಳೆ ನ್ಯೂಸ್

ಪುತ್ತೂರು: ಬಡಗನ್ನೂರು ವಲಯ ಕಾಂಗ್ರೆಸ್ ವತಿಯಿಂದ ಬಡಗನ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಬಡವರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ತಾನು ಶಾಸಕನಾಗಿ ಮೊದಲ ಆದ್ಯತೆ ನೀಡುತ್ತೇನೆ. ಸರಕಾರದ ಯೋಜನೆಗಳು ಎಲ್ಲ ಅರ್ಹ ಫಲಾನುಭವಿಗಳಿಗೂ ಸಿಗುವಂತಾಗಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಐದು ಗ್ಯಾರಂಟಿ ಯೋಜನೆಗಳು ಇಂದು ಎಲ್ಲರ ಮನೆಯನ್ನು ಬೆಳಗಿಸಿದೆ. ಅಧಿಕಾರಕ್ಕೆ ಬಂಧ ಮೂರೇ ತಿಂಗಳೊಳಗೆ ಗ್ಯಾರಂಟಿಯನ್ನು ಈಡೇರಿಸಿದ್ದೇವೆ ಇದು ಕಾಂಗ್ರೆಸ್ ಪಕ್ಷದ ತಾಕತ್ತು, ಟೀಕೆ ಮಾಡುವವರು ಮಾಡುತ್ತಲೇ ಇದ್ದಾರೆ, ಇವರ ಟೀಕೆಗಳ ನಡುವೆಯೇ ಸರಕಾರ ಐದು ಗ್ಯಾರಂಟಿಯನ್ನು ಜಾರಿಗೆ ತಂದಿದ್ದು ಜನತೆಗೆ ಕೊಟ್ಟ ಮಾತನ್ನು ಸರಕಾರ ಈಡೇರಿಸಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂದಿನ ಕೆಲವೇ ದಿನಗಳಲ್ಲಿ ತನ್ನ ಕಚೇರಿ ಆರಂಭವಾಗಲಿದ್ದು ನಿಮ್ಮ ಯಾವುದೇ ಅರ್ಜಿಗಳಿದ್ದರೂ ಕಚೇರಿಗೆ ಬಂದು ಕೊಡಿ ಅದಕ್ಮೆ ಸ್ಪಂದಿಸುವ ಕೆಲಸವನ್ನು ಮಾಡುತ್ತೇನೆ. 94 ಸಿ ಅರ್ಜಿ ಹಾಕಿದವರಿಗೆಲ್ಲರಿಗೂ ಹಕ್ಕುಪತ್ರ ಕೊಡಿಸುತ್ತೇನೆ, ಫ್ಲಾಟಿಂಗ್ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ,ಈಶ್ವರಮಂಗಲ ಮಂಡಲ ಪಂಚಾಯತ್ ಮಾಜಿ ಉಪ ಪ್ರಧಾನ ಬಾಲಕೃಷ್ಣ ರೈ ಕುದ್ದಾಡಿ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ, ಗ್ರಾ.ಪಂ ಮಾಜಿ ಅಧ್ಯಕ್ಷೆ ಶ್ರೀಮತಿ ಕೆ, ಸದಸ್ಯರಾದ ರವಿರಾಜ ರೈ ಸಜಂಕಾಡಿ, ಜ್ಯೋತಿ ಅಂಬಟೆಮೂಲೆ, ಧಮೇರ್ಂದ್ರ ಪದಡ್ಕ, ಕಲಾವತಿ ಗೌಡ ಪಟ್ಲಡ್ಕ ಉಪಸ್ಥಿತರಿದ್ದರು.