Monday, November 25, 2024
ಸುದ್ದಿ

ಮಂಗಳೂರು : ಸಂಚಾರ ನಿಯಮ ಉಲ್ಲಂಘನೆ 298 ಡಿಎಲ್ ರದ್ದು, 810 ಪ್ರಕರಣ ದಾಖಲು – ಕಹಳೆ ನ್ಯೂಸ್

ಮಂಗಳೂರು : ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಆ.6ರಿಂದ 21ರವರೆಗೆ ಸಂಚಾರ ಪೆÇಲೀಸರು ನಡೆಸಿದ ತಪಾಸಣೆಯ ಸಂದರ್ಭ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ 298 ಮಂದಿಯ ಚಾಲನಾ ಪರವಾನಿಗೆ (ಡಿಎಲ್) ರದ್ದತಿಗೆ ಆರ್‍ಟಿಒ ಗೆ ಶಿಫಾರಸು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ಅನಿಯಮಿತ ವೇಗ ಮತ್ತು ನಿರ್ಲಕ್ಷ್ಯದ 71, ಮದ್ಯಪಾನಗೈದ 20, ಗೂಡ್ಸ್ ವಾಹನಗಳಲ್ಲಿ ಜನರ ಸಾಗಾಟ 42, ವಾಹನ ಸಂಚಾರ/ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿರುವ 4, ಕೆಂಪು ದೀಪ ಉಲ್ಲಂಘಿಸಿದ 10, ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್‍ನ 7, ಹೆಲ್ಮಟ್ ಧರಿಸದ 128, ಸೀಟ್ ಬೆಲ್ಟ್ ಹಾಕದ 16 ಪ್ರಕರಣ ಹೀಗೆ ಒಟ್ಟು 298 ಪ್ರಕರಣಗಳಿಗೆ ಸಂಬಂಧಿಸಿದಂತೆ ಡಿಎಲ್ ಅಮಾನತಿಗೆ ಶಿಫಾರಸು ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕಳೆದ 15 ದಿನಗಳ ಅವಧಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಅನಧಿಕೃತವಾಗಿ ಪಾರ್ಕ್ ಮಾಡಲಾದ 593, ಕರ್ಕಶ ಹಾರ್ನ್ ಬಳಸುತ್ತಿದ್ದ 106, ಟಿಂಟ್ ಗ್ಲಾಸ್ ಹಾಕಿದ್ದ 70, ಏಕಮುಖ ಸಂಚಾರ ಮಾಡಿದ 28 ಹಾಗೂ ಹೆಚ್ಚು ಬಾಡಿಗೆ ಅಥವಾ ಸೂಚಿತ ಸ್ಥಳಕ್ಕೆ ಬರಲೊಪ್ಪದ 13 ರಿಕ್ಷಾ ಚಾಲಕರ ವಿರುದ್ಧ ಸಹಿತ 810 ಪ್ರಕರಣಕ್ಕೆ ಸಂಬಂಧಿಸಿ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ.