Thursday, January 23, 2025
ಸುದ್ದಿ

ಚಂದ್ರಯಾನ-3 ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ನಟ ಪ್ರಕಾಶ್ ರೈ – ಕಹಳೆ ನ್ಯೂಸ್

ದೇಶವೇ ಹೆಮ್ಮೆ ಪಡುತ್ತಿರುವ ಚಂದ್ರಯಾನ 3 ಬಗ್ಗೆ ನಟ ಪ್ರಕಾಶ್ ರಾಜ್ ಅಪಹಾಸ್ಯ ಮಾಡಿದ್ದು, ಅನೇಕರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೇ ನಟನ ಪೋಸ್ಟ್ ಬಗ್ಗೆ ಕಿಡಿಕಾರಿದ್ದಾರೆ.

ಚಂದ್ರಯಾನ ಇದೀಗ ಕಳುಹಿಸಿರುವ ಫೋಟೋ ಎಂಬ ಕ್ಯಾಪ್ಷನ್ ನೀಡಿ, ಇಸ್ರೋ ಮಾಜಿ ಮುಖ್ಯಸ್ಥ ಕೆ ಶಿವನ್ ಚಹಾವನ್ನು ಸುರಿಯುತ್ತಿರುವ ವ್ಯಂಗ್ಯಚಿತ್ರವನ್ನು ಒಳಗೊಂಡ ಪೋಸ್ಟ್ ಅನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಫೋಟೋ ನೋಡಿದ ನೆಟ್ಟಿಗರು ನಟನ ವಿರುದ್ಧ ಕಿಡಿಕಾರಿದ್ದು, ಪೋಸ್ಟ್ ವೈರಲ್ ಆಗುತ್ತಿದ್ದಂತೆ ನಟ ಮತ್ತೊಂದು ಸ್ಪಷ್ಟನೆಯ ಟ್ವೀಟ್ ಮಾಡುವ ಮೂಲಕ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ದ್ವೇಷಿಸಿವವರು ದ್ವೇಷವನ್ನು ಮಾತ್ರ ನೋಡುತ್ತಾರೆ. ನಾನು #Armstrong times ಹಾಸ್ಯವನ್ನು ಉಲ್ಲೇಖಿಸುತ್ತಿದ್ದೆ. ನಾವು ಕೇರಳದ ಚಾಯ್‍ವಾಲಾವನ್ನು ಆಚರಿಸುತ್ತಿದ್ದೇನೆ. ಟ್ರೋಲ್‍ಗಳು ಯಾವ ಚಾಯ್‍ವಾಲಾ ನೋಡಿದ್ದಾರೆ? ನಿಮಗೆ ಜೋಕ್ ಸಿಗದಿದ್ದರೆ ಜೋಕ್ ನಿಮ್ಮ ಮೇಲಿರುತ್ತದೆ. GROW UP #justasking ಎಂದು ಪ್ರಕಾಶ್ ರಾಜ್ ಬರೆದುಕೊಂಡಿದ್ದಾರೆ.