Monday, November 25, 2024
ಸುದ್ದಿ

ಅನ್ನಭಾಗ್ಯ ಪಡಿತರದ ಪ್ರತಿ ಕಾರ್ಡ್ ನಿಂದ 1 ಕೆ.ಜಿ ಅಕ್ಕಿ ಕದಿಯುತ್ತಿದ್ದ ಸಿಬ್ಬಂಧಿ..! -ಕಹಳೆ ನ್ಯೂಸ್

ಅನ್ನಭಾಗ್ಯ ಯೋಜನೆಯಡಿ ಪಡಿತರ ನೀಡುತ್ತಿದ್ದ ಸಿಬ್ಬಂದಿ ಪ್ರತಿ ಕಾರ್ಡ್ ಗೆ  1 ಕೆ.ಜಿ ಅಕ್ಕಿ ಕದಿಯುತ್ತಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಹೊಳೆ ಗ್ರಾಮದಲ್ಲಿ ನಡೆದಿದೆ.

ಸಿದ್ದಪ್ಪ ಎನ್ನುವರು ಫಲಾನುವಿಗಳಿಗೆ ಗೊತ್ತಿಲ್ಲದಂತೆ ಪ್ರತಿ ಕಾರ್ಡ್ ದ 1 ಕೆ.ಜಿ ಅಕ್ಕಿ ಕದಿಯುದ್ದ. ಸಿದ್ದಪ್ಪ ಗ್ರಾಮದ ನ್ಯಾಯಬೆಲೆ ಅಂಗಡಿಯ ಲೈಸನ್ಸ್ ಹೊಂದಿದ್ದು, ಇದರಡಿ ಮಾವಿನಹೊಳೆ, ಮರಳಹಟ್ಟಿ, ದಂಡಿಗನಹಳ್ಳಿ ಮತ್ತು ಗಂಡಗನ ಹಂಕಲು ಗ್ರಾಮಗಳ 250ಕ್ಕೂ ಅಧಿಕ ಕಾರ್ಡ್ ಗಳಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಗ್ರಾಮಗಳಿಂದ ಬರುವ ಫಲಾನುಭವಿಗಳಿಗೆ ಗೊತ್ತಿಲ್ಲದಂತೆ ಸಿಬ್ಬಂದಿ ಪ್ರತಿ ಕಾರ್ಡಿಗೆ 1ಕೆ.ಜಿ ಅಕ್ಕಿ ಕದಿಯುತ್ತಿದ್ದನು ಎನ್ನಲಾಗಿದೆ. ಸದ್ಯ ಸಿಬ್ಬಂದಿ ಮಾಡುತ್ತಿದ್ದ ಕಳ್ಳಾಟವನ್ನು ಹನಮಂತ ನಾಯ್ಕ್ ಎಂಬ ಯುವಕ ವಿಡಿಯೋ ಮಾಡಿದ್ದಾನೆ. ಬಳಿಕ ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಇದನ್ನ ಕುರಿತು ನೀನೇನು ಕೇಳಬೇಡ. ಬೇಕಾದರೇ ಹೆಚ್ಚಿಗೆ ಅಕ್ಕಿ ತೆಗೆದುಕೊಂಡು ಹೋಗು ಎಂದು ಯುವಕನಿಗೆ ಸೂಚಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಲೂಕಿನಾದ್ಯಂತ ಅನೇಕ ಕಡೆ ಇಂತಹ ಸಮಸ್ಯೆ ನಡೆಯುತ್ತಿವೆ. ಹೀಗಾಗಿ ಕಡಿಮೆ ಅಕ್ಕಿ ನೀಡುವ ಸಿಬ್ಬಂದಿಯ ಲೈಸನ್ಸ್ ಕ್ಯಾನ್ಸಲ್ ಮಾಡುವಂತೆ ಜನರು ಒತ್ತಾಯಿಸಿದ್ದಾರೆ. ಜನರ ಒತ್ತಾಯದ ಮೇರೆಗೆ ಈ ಬಗ್ಗೆ ಆಹಾರ ಇಲಾಖೆ, ಆಂತರಿಕ ತನಿಖೆಗೆ ಸೂಚನೆ ನೀಡಿದೆ.