Friday, January 24, 2025
ಸುದ್ದಿ

2 ದಿನಗಳ ಹಿಂದೆ ನಡೆದ ಆಂಬುಲೆನ್ಸ್ ಆಕ್ಸಿಡೆಂಟ್ : ಆಂಬುಲೆನ್ಸ್ ನಲ್ಲಿದ್ದ ಗಾಯಾಳು ಮಹಿಳೆ ಸಾವು – ಕಹಳೆ ನ್ಯೂಸ್

ಎರಡು ದಿನಗಳ ಹಿಂದೆ ವಗ್ಗ ಬಳಿ ನಡೆದ ಆ್ಯಂಬುಲೆನ್ಸ್‌ ಅಪಘಾತದಲ್ಲಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಅದರಲ್ಲಿ ಗಾಯಾಳು ಅಳದಂಗಡಿ ಸನಿಹದ ಮಹಿಳೆ ಸೋಮವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಳದಂಗಡಿ ಸನಿಹದ ಬಡಗ ಕಾರಂದೂರು ಗ್ರಾಮದ ಸುಂಕದಕಟ್ಟೆ ನಿವಾಸಿ ದಿ| ಹಸನ್‌ ಅವರ ಪತ್ನಿ ಮರಿಯಮ್ಮ ಮೃತರು. ಆ ಮೂಲಕ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೇರಿದೆ.

ಶುಕ್ರವಾರ ಮಹಿಳೆಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಇಸಿಜಿ ಸಹಿತ ತುರ್ತು ಚಿಕಿತ್ಸೆ ನೀಡಿ, ಹೃದಯನಾಳಗಳಲ್ಲಿ ಬ್ಲಾಕ್‌ ಇರುವುದರಿಂದ ವೈದ್ಯರು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು. ಅಂತೆಯೇ ಶಬೀರ್‌ ಅವರ ಆ್ಯಂಬುಲೆನ್ಸ್‌ನಲ್ಲಿ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ವಗ್ಗ ಬಳಿ ಅಪಘಾತ ನಡೆದಿತ್ತು. ಈ ವೇಳೆ ಚಾಲಕ ಶಬೀರ್‌ ತೀವ್ರ ಗಾಯಗೊಂಡು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇನ್ನು ಹೃದಯದ ತೊಂದರೆ ಇದ್ದ ಮಹಿಳೆ ಮರಿಯಮ್ಮ ಅವರು ಅಪಘಾತದ ವೇಳೆ ತಲೆಗೆ ಗಾಯಗಳಾಗಿ ರಕ್ತಸ್ರಾವವಾಗಿತ್ತು. ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅವರು ಸೋಮವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.