Monday, November 25, 2024
ಸುದ್ದಿ

ಮೂಡುಬಿದಿರೆಯಲ್ಲಿ ಅನೈತಿಕ ಪೊಲೀಸ್ ಗಿರಿ: ಸಹಪಾಠಿಯೊಂದಿಗೆ ಮಾತನಾಡಿದ್ದಕ್ಕೆ ಯುವಕನೋರ್ವನ ಮೇಲೆ ಗುಂಪಿನಿಂದ ಹಲ್ಲೆ – ಕಹಳೆ ನ್ಯೂಸ್

ತನ್ನ ಸಹಪಾಠಿ ಹುಡುಗಿಯೊಂದಿಗೆ ಮಾತನಾಡಿದ ಎನ್ನುವ ಕಾರಣಕ್ಕೆ ವಿದ್ಯಾರ್ಥಿಯೋರ್ವನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಅನೈತಿಕ ಪೊಲೀಸ್ ಗಿರಿ ನಡೆಸಿರುವ ಘಟನೆ ನಿನ್ನೆ ರಾತ್ರಿ ಮೂಡುಬಿದಿರೆಯ ರಾಜೀವ ಗಾಂಧಿ ಸಂಕೀರ್ಣದ ಎದುರು ನಡೆದಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅನೈತಿಕ ಪೊಲೀಸ್ ಗಿರಿ ನಡೆಸುವವರ ಮೇಲೆ ಕಾನೂನು ಕ್ರಮವೆಂದು ಎಚ್ಚರಿಸಿದ್ದರೂ ಆ ಎಚ್ಚರಿಕೆಗೆ ಕ್ಯಾರೇ ಮಾಡದ ಈ ಉಂಡಾಡಿ ಗುಂಡರು ತಮ್ಮ ಮಹಾ ಸಾಧನೆ ಎಂದು ಗುಂಪುಕಟ್ಟಿ ಓರ್ವ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ತಮ್ಮ ಶಕ್ತಿ ಪ್ರದರ್ಶನ ತೋರ್ಪಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆ ರಾತ್ರಿ ಮೂಡುಬಿದಿರೆ ಕಾಲೇಜಿನ ವಿದ್ಯಾರ್ಥಿನಿ ಯೋರ್ವಳು ತನ್ನೂರು ಬೆಂಗಳೂರಿಗೆ ಹೋಗಲು ರಾಜೀವ್ ಗಾಂಧಿ ಕಾಂಪ್ಲೆಕ್ಸ್ ಎದುರು ನಿಂತಿದ್ದಳು. ಅದೇ ಸಮಯದಲ್ಲಿ ಯಾವುದೋ ಕೆಲಸಕ್ಕೆ ಬಂದಿದ್ದ ಕೋಟೆಬಾಗಿಲು ಸಮೀಪದ ವಿದ್ಯಾರ್ಥಿ ತನ್ನ ಸಹಪಾಠಿ ಹುಡುಗಿಯೊಂದಿಗೆ ಮಾತನಾಡಿ ದ್ದಾನೆ. ಅಷ್ಟೇ ನಡೆದದ್ದು. ಆಕೆ ಆಕೆಯ ಪಾಡಿಗೆ ಬಸ್ ಹತ್ತಿ ಹೋಗಿದ್ದಾಳೆ. ಹುಡುಗಿಯೊಂದಿಗೆ ಮಾತನಾಡಿದ ಹುಡುಗ ಮುಸ್ಲಿಂ ಎಂದು ಅಲ್ಲೇ ತಿರುಗಾಡುತ್ತಿದ್ದ ಉಂಡಾಡಿಗುಂಡರಿಗೆ ಗೊತ್ತಾಗಿದೆ. ಕೂಡಲೇ ಸುತ್ತುವರಿದು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಕಂಡು ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪೆಟ್ಟು ತಿಂದಿದ್ದ ಹುಡುಗನನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತನ್ನ ಸಹಪಾಠಿಯೊಂದಿಗೆ ಮಾತನಾಡುವುದು ತಪ್ಪಾ? ಮಾತನಾಡಲೇಬಾರದೆಂಬ ಕಾನೂನೇನಾದರೂ ಇದೆಯಾ? ಅಷ್ಟಕ್ಕೂ ಹಲ್ಲೆ ನಡೆಸಲು ಇವರ್ಯಾರು? ಇವರಿಗೆ ಅಧಿಕಾರ ಕೊಟ್ಟವರ್ಯಾರು? ಇವರೇ ಕಾನೂನು ಕೈಗೆತ್ತಿಕೊಳ್ಳುವು ದಾದರೆ ಪೊಲೀಸರು ಯಾಕೆ? ಒಂದು ವೇಳೆ ತಪ್ಪು ಅಂತ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬಹುದಿ ತ್ತಲ್ಲಾ?…. ಮುಂತಾದ ಪ್ರಶ್ನೆಗಳು ಕೇಳಿಬರುತ್ತಿದೆ. ಇದೀಗ ವಿದ್ಯಾರ್ಥಿ ಎನ್ ಎಸ್ ಯು ಐ ವಿದ್ಯಾರ್ಥಿ ಸಂಘಟನೆ ಯವನೆಂದು ಹೇಳಲಾಗುತ್ತಿದ್ದು ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹಗಳು ಕೇಳಿಬರುತ್ತಿದೆ.

ಹಲ್ಲೆಗೊಳಗಾದ ಹುಡುಗ ಮೂಡುಬಿದಿರೆ ಪೊಲೀಸರಿಗೆ ನೀಡಿದ ದೂರಿನಂತೆ ದೂರು ದಾಖಲಾಗಿದ್ದು ಆರೋಪಿಗಳ ಬಂಧನ ಇನ್ನಷ್ಟೇ ಆಗಬೇಕಿದೆ. ರಾತ್ರಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಈ ಘಟನೆಯ ಕುರಿತಂತೆ ಠಾಣೆಗೆ ಜಮಾಯಿಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.