ಭಾರತದ ಅತ್ಯಂತ ಹಳೆಯ ಆನೆ ಬಿಜುಲಿ ಪ್ರಸಾದ್ ಸಾವನ್ನಪ್ಪಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಿಜುಲಿ ಪ್ರಸಾದ್ ಇಂದು ಬೆಳಗಿನ ಜಾವ 3.30ರ ಸುಮಾರಿಗೆ ದಿ ವಿಲಿಯನ್ಸನ್ ಮಾಗೊರ್ ಗ್ರೂಪ್‌ನ ಬೆಹಾಲಿ ಟೀ ಎಸ್ಟೇಟ್‌ನಲ್ಲಿ ಕೊನೆಯುಸಿರೆಳೆದಿದೆ. ಬಿಜುಲಿ ಪ್ರಸಾದ್ ಆನೆಯ ವಯಸ್ಸು 89 ವರ್ಷ ಎಂದು ಅಂದಾಜಿಸಲಾಗಿದೆ. ದೇಶೀಯ ಏಷ್ಯಾಟಿಕ್ ಸಾಕಾನೆ ಮೃತಪಟ್ಟಿದೆ ಎಂದು ಅಸ್ಸಾಂ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಬಿಜುಲಿ ಪ್ರಸಾದ್ ಆನೆಯು ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ದಿ ವಿಲಿಯನ್ಸನ್ ಮಾಗೊರ್ ಗ್ರೂಪ್‌ನ ಬೆಹಾಲಿ ಟೀ ಎಸ್ಟೇಟ್‌ನ ಕೆಲಸಗಾರರು ಮತ್ತು ಸ್ಥಳೀಯರು ಸೇರಿದಂತೆ ಅನೇಕರು ಬಿಜುಲಿ ಪ್ರಸಾದ್ ಸಾವಿಗೆ ಸಂತಾಪ ಸೂಚಿಸಿದರು. ಬಿಜುಲಿ ಪ್ರಸಾದ್ ದಿ ವಿಲಿಯನ್ಸನ್ ಮಾಗೊರ್ ಗ್ರೂಪ್‌ಗೆ ಹೆಮ್ಮೆಯ ಸಂಕೇತವಾಗಿತ್ತು. ಇದನ್ನು ಮೊದಲು ಬಾರ್‌ಗಾಂಗ್ ಟೀ ಎಸ್ಟೇಟ್‌ಗೆ ಪುಟಾಣಿ ಕರುವಾಗಿದ್ದ ತರಲಾಗಿತ್ತು. ನಂತರ ಬಾರ್‌ಗಾಂಗ್ ಟೀ ಎಸ್ಟೇಟ್ ಅನ್ನು ಕಂಪನಿಯು ಮಾರಾಟ ಮಾಡಿದ ನಂತರ ಇಲ್ಲಿಗೆ ಸ್ಥಳಾಂತರಿಸಲಾಯಿತು.
ಸಾಮಾನ್ಯವಾಗಿ, ಏಷ್ಯಾದ ಕಾಡು ಆನೆಗಳು ೬೨-೬೫ ವರ್ಷಗಳವರೆಗೆ ಬದುಕುತ್ತವೆ, ಆದರೆ ಸಾಕುಪ್ರಾಣಿಗಳು ಸರಿಯಾದ ಕಾಳಜಿಯೊಂದಿಗೆ ಸುಮಾರು ೮೦ ವರ್ಷಗಳವರೆಗೆ ಬದುಕುತ್ತವೆ. ಬಿಜುಲಿ ಪ್ರಸಾದ್ ಆನೆಯ ಬಗ್ಗೆ ಶಸ್ತ್ರಚಿಕಿತ್ಸಕ ಡಾ.ಕುಶಾಲ್ ಕನ್ವರ್ ಶರ್ಮಾ ಅತೊಯಾದ ಕಾಳಜಿಯನ್ನ ತೋರಿಸುತ್ತಿದ್ದರು.ಈ ಬಗ್ಗೆ ಮಾತನಾಡಿರುವ ಇವರು ಸುಮಾರು ೮-೧೦ ವರ್ಷಗಳ ಹಿಂದೆ ಅದರ ಎಲ್ಲಾ ಹಲ್ಲುಗಳು ಉದುರಿದ ನಂತರ, ಬಿಜುಲಿ ಪ್ರಸಾದ್ ಏನನ್ನೂ ತಿನ್ನಲು ಸಾಧ್ಯವಾಗಲಿಲ್ಲ. ನಂತರ ನಾನು ಅಲ್ಲಿಗೆ ಹೋಗಿ ಚಿಕಿತ್ಸೆ ನೀಡಿದ್ದೇನೆ. ನಾನು ಅವರ ಸಾಮಾನ್ಯ ಆಹಾರವನ್ನು ಬದಲಿಸಿ, ಹೆಚ್ಚಾಗಿ ಅಕ್ಕಿ ಮತ್ತು ಸೋಯಾಬೀನ್ ಮುಂತಾದ ಬೇಯಿಸಿದ ಆಹಾರವನ್ನು ನೀಡಲು ಪ್ರಾರಂಭಿಸಿದೆ. ಹೆಚ್ಚಿನ ಪ್ರೊಟೀನ್ ಮೌಲ್ಯದೊಂದಿಗೆ. ದೀರ್ಘಾಯುಷ್ಯವನ್ನು ಹೆಚ್ಚಿಸಿತು ಎಂದು ತಿಳಿಸಿದ್ದಾರೆ.
ಇನ್ನು ಆನೆಗೆ ಪ್ರತಿದಿನ ಸುಮಾರು ೨೫ ಕೆಜಿ ಆಹಾರವನ್ನು ನೀಡಲಾಗುತ್ತಿತ್ತು ಎಂದು ಬೆಹಾಲಿ ಟೀ ಎಸ್ಟೇಟ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.