ಭಾರತದ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-೩ ಬಹುನಿರೀಕ್ಷಿತ ಹಂತಕ್ಕೆ ತಲುಪಿದ್ದು, ನಾಳೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಅಂಗಳಕ್ಕೆ ಸುಲಲಿತವಾಗಿ ಇಳಿಯುವ ನಿರೀಕ್ಷೆ ಇದ್ದು, ಈ ಐತಿಹಾಸಿಕ ಘಟ್ಟ ತಲುಪುವ ಕ್ಷಣವನ್ನು ಇಡೀ ವಿಶ್ವವೇ ಕಾಯುತ್ತಿದೆ. ಇಸ್ರೋಗೆ ಸಾಫ್ಟ್ ಲ್ಯಾಂಡಿoಗ್ ಒಂದು ಸವಾಲಾಗಿದ್ದು, ಕೊನೆಯ 20 ನಿಮಿಷ ಬಹಳ ನಿರ್ಣಾಯಕವಾಗಿದೆ.
ಚಂದ್ರಯಾನ-3 ಲ್ಯಾಂಡ್ ಆಗುವ ಎರಡು ಗಂಟೆ ಮೊದಲು, ಲ್ಯಾಂಡರ್ ಮಾಡ್ಯೂಲ್ನ ಆರೋಗ್ಯ ಹಾಗೂ ಚಂದ್ರನ ಸ್ಥಿತಿಗತಿಯನ್ನು ನೋಡಿಕೊಂಡು ಆಕಾಶನೌಕೆಯನ್ನು ಆ ಸಮಯದಲ್ಲಿ ಇಳಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ. ಒಂದು ವೇಳೆ ಅನಾನುಕೂಲಕರ ಅಂಶಗಳು ಕಂಡಬoದಲ್ಲಿ ಮಾಡ್ಯೂಲನ್ನು ಆಗಸ್ಟ್ 27ರಂದು ಚಂದ್ರನ ಮೇಲೆ ಇಳಿಸಲಾಗುವುದು ಎಂದು ಇಸ್ರೋ ಬಾಹ್ಯಾಕಾಶ ಅನ್ವಯಿಕೆ ಕೇಂದ್ರದ ನಿರ್ದೇಶಕ ನೀಲೇಶ್ ಎಂ. ದೇಸಾಯಿ ಹೇಳಿದ್ದಾರೆ.
ಚಂದ್ರಯಾನ ನೌಕೆ ಲ್ಯಾಂಡ್ ಹೇಗಿರುತ್ತೆ..?
ಇಸ್ರೋದ ಬಾಹುಬಲಿ ರಾಕೆಟ್ ಅಥವಾ ಲಾಂಚ್ ವೆಹಿಕಲ್ ಜುಲೈ ೧೪ರಂದು ಚಂದ್ರಯಾನ ೩ ನೌಕೆಯನ್ನು ಹೊತ್ತು ನಭಕ್ಕೆ ಜಿಗಿಯಿತು. ಬಳಿಕ ಚಂದ್ರಯಾನ ನೌಕೆಯು ಭೂ ಕಕ್ಷೆಯನ್ನು ಸೇರುವಲ್ಲಿ ಯಶಸ್ವಿಯಾಯಿತು. ತನ್ನ ವೇಗವನ್ನು ಹೆಚ್ಚಿಸಿಕೊಳ್ಳಲು ಚಂದ್ರಯಾನ ೩ ಭೂಮಿಯ ಸುತ್ತ ಹಲವು ಎಲಪ್ಟಿಕಲ್ ರೌಂಡ್ ಹಾಕಿತು. ಆಗಸ್ಟ್ ೧ರಂದು ಚಂದ್ರಯಾನ ತನ್ನ 3.84 ಲಕ್ಷ ಕಿ.ಮೀ ಜರ್ನಿಯಲ್ಲಿ ಭೂಮಿಯನ್ನು ಬಿಟ್ಟು ಚಂದ್ರನ ಕಡೆ ಸಾಗಿತು. ಆ. ೫ರಂದು ಚಂದ್ರಯಾನ ಉಪಗ್ರಹ ಚಂದ್ರನ ಕಕ್ಷೆಯನ್ನು ಪ್ರವೇಶಿಸುವಲ್ಲಿ ಯಶಸ್ಸು ಸಾಧಿಸಿತು. ಚಂದ್ರನ ಕಕ್ಷೆಯಲ್ಲಿ ಯಾವುದೇ ಸಮಸ್ಯೆಯಾಗದೇ ಹಲವು ದಿನಗಳವರೆಗೆ ಚಂದ್ರಯಾನ ನೌಕೆ ಗಿರಕಿ ಹೊಡೆಯಿತು.
ಈ ಪ್ರಯಾಣದ ಮಹತ್ವದ ಘಟ್ಟವಾದ ಪ್ರೊಪಲ್ಸನ್ ಮಾಡ್ಯೂಲ್‌ನಿಂದ ವಿಕ್ರಮ್ ಲ್ಯಾಂಡರ್ ಬೇರ್ಪಡುವಿಕೆ ಕಾರ್ಯ ಆ.17ರಂದು ಯಶಸ್ಸಿಯಾಗಿ ನಡೆಯಿತು. ಈ ವೇಳೆ ಚಂದ್ರಯಾನ ನೌಕೆ ಚಂದ್ರನಿAದ 153 ಕಿ.ಮೀ ನಿಂದ 163 ಕಿ.ಮೀ ಆರ್ಬಿಟ್‌ನಲ್ಲಿ ಸುತ್ತುತ್ತಿತ್ತು. ಇದೀಗ ಪ್ರೊಪಲ್ಸನ್ ಮಾಡ್ಯೂಲ್ ಚಂದ್ರನಿAದ 153 ಕಿ.ಮೀ ನಿಂದ 163 ಕಿ.ಮೀ ಆರ್ಬಿಟ್‌ನಲ್ಲೇ ತನ್ನ ಕಕ್ಷೆಯ ಸುತ್ತುವಿಕೆ ಕಾರ್ಯವನ್ನು ಮುಂದುವರಿಸಿದೆ.
ಇದಾದ ಬಳಿಕ ವಿಕ್ರಮ್ ಲ್ಯಾಂಡರ್ ಅನ್ನು 134 ಕಿಮೀ ಹಾಗೂ 25 ಕಿಮೀ ದೀರ್ಘವೃತ್ತದ ಕಕ್ಷೆಯಲ್ಲಿ ಚಂದ್ರನ ಮೇಲ್ಮೈಗೆ ಹತ್ತಿರ ತರಲಾಯಿತು. ಚಂದ್ರಯಾನ 2 ಕೂಡ ಈ ಹಂತದವರೆಗೂ ಯಶಸ್ಸು ಸಾಧಿಸಿತ್ತು. ಆದರೆ, ಲ್ಯಾಂಡಿoಗ್ ದಿನ 20 ನಿಮಿಷಗಳ ಕಾರ್ಯಾಚರಣೆ ಸಂದರ್ಭದಲ್ಲಿ ವಿಫಲವಾಯಿತು. ಇದೀಗ ಚಂದ್ರಯಾನ 3 ಕೂಡ ಇದೇ ಹಂತದಲ್ಲಿದೆ. ಬೆಂಗಳೂರಿನ ಇಸ್ರೋ ಕಚೇರಿಯಿಂದ ಮಾನಿಟರ್ ಮಾಡಲಾಗುತ್ತಿದ್ದು, ವಿಕ್ರಮ್ ಲ್ಯಾಂಡರ್, ಚಂದ್ರನಿoದ 25 ಕಿ.ಮೀ ಎತ್ತರದಿಂದ ಅವರೋಹಣ ಕ್ರಮದಲ್ಲಿ ಚಂದ್ರನ ಮೇಲೆ ಇಳಿಯಲು ಪ್ರಯಾಣ ಆರಂಭಿಸಲಿದೆ.
ಈ ಅವರೋಹಣ ಇಳಿಕಾ ಕ್ರಮದಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಸೆಕೆಂಡಿಗೆ 1.68 ಕಿಮೀ ವೇಗದಲ್ಲಿ ಚಲಿಸಲು ಪ್ರಾರಂಭಿಸುತ್ತದೆ, ಇದು ಗಂಟೆಗೆ ಸುಮಾರು 6048ಕಿಮೀ. ಈ ವೇಗ ವಿಮಾನದ ವೇಗಕ್ಕಿಂತ ಹತ್ತು ಪಟ್ಟು ಹೆಚ್ಚು ಎಂಬುದೇ ಅಚ್ಚರಿಯ ಸಂಗತಿ. ಇಳಿಯುವ ವೇಳೆ ವಿಕ್ರಮ್ ಲ್ಯಾಂಡರ್ ತನ್ನ ಎಲ್ಲ ಇಂಜಿನ್‌ಗಳ ಫೈರಿಂಗ್ ಅನ್ನು ನಿಧಾನಗೊಳ್ಳುತ್ತದೆ. ಆದರೆ, ಲ್ಯಾಂಡರ್ ಈ ವೇಳೆ ಚಂದ್ರನ ಮೇಲ್ಮೈಗೆ ಬಹುತೇಕ ಅಡ್ಡಲಾಗಿ ಚಲಿಸುತ್ತದೆ. ಇದು ಸುಮಾರು 11 ನಿಮಿಷಗಳ ಕಾಲ ನಡೆಯುವ ರಫ್ ಬ್ರೇಕಿಂಗ್ ಹಂತ ಎಂದು ಕರೆಯಲ್ಪಡುತ್ತದೆ.
ಇದಾದ ಬಳಿಕ ಕೆಲವು ತಂತ್ರಗಳ ಮೂಲಕ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈಗೆ ಲಂಬವಾಗಿ ಮಾಡಲಾಗುತ್ತದೆ, ಇದರೊಂದಿಗೆ ‘ಸೂಕ್ಷ್ಮ ಬ್ರೇಕಿಂಗ್ ಹಂತ’ ಪ್ರಾರಂಭ ಮಾಡಲಾಗುತ್ತದೆ. ಚಂದ್ರಯಾನ-2 ನೌಕೆಯ ವಿಕ್ರಮ್ ಲ್ಯಾಂಡರ್ ನಿಯಂತ್ರಣ ತಪ್ಪಿ ಪತನಗೊಂಡಾಗ ಅದು ಕೂಡ ಇದೇ ಹಂತದಲ್ಲಿತ್ತು. ಚಂದ್ರನ ಮೇಲ್ಮೈಯಿಂದ 800 ಮೀಟರ್‌ಗಳಷ್ಟು ಎತ್ತರದಲ್ಲಿ, ಸಮತಲ ಮತ್ತು ಲಂಬವಾದ ವೇಗಗಳು ಶೂನ್ಯಕ್ಕೆ ಬರುತ್ತವೆ ಮತ್ತು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಸುಳಿದಾಡುತ್ತದೆ ಮತ್ತು ಲ್ಯಾಂಡಿoಗ್ ಸ್ಟ್ರಿಪ್ ಅನ್ನು ಸಮೀಕ್ಷೆ ಮಾಡುತ್ತದೆ.
ವಿಕ್ರಮ್ ಲ್ಯಾಂಡರ್ 150ಮೀಟರ್ ಎತ್ತರದಲ್ಲಿ ಮತ್ತೊಮ್ಮೆ ಸುಳಿದಾಡಲು ಕೆಳಗೆ ಇಳಿಯುತ್ತದೆ. ಬಳಿಕ ಅಪಾಯಗಳ ಪತ್ತೆಗಾಗಿ ಚಿತ್ರಗಳನ್ನು ತೆಗೆಯುವುದು ಮತ್ತು ಅತ್ಯುತ್ತಮ ಲ್ಯಾಂಡಿoಗ್ ಸೈಟ್ ಅನ್ನು ಹುಡುಕುತ್ತದೆ. ಉತ್ತಮವಾದ ಸ್ಥಳ ದೊರೆತರೆ ಚಂದ್ರಯಾನ ನೌಕೆಯು ಕೇವಲ ಎರಡು ಇಂಜಿನ್‌ಗಳ ಫೈರಿಂಗ್‌ನೊoದಿಗೆ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುತ್ತದೆ ಮತ್ತು ವಿಕ್ರಮ್ ಲ್ಯಾಂಡಿಗ್ ಕಾಲುಗಳನ್ನು ಪ್ರತಿ ಸೆಕೆಂಡ್‌ಗೆ ೩ ಮೀಟರ್ ಅಥವಾ ಗಂಟೆಗೆ 10.8ಕಿಮೀ ಗರಿಷ್ಠ ಪರಿಣಾಮವನ್ನು ತಡೆಯುವಲ್ಲಿ ವಿನ್ಯಾಸಗೊಳಿಸಲಾಗಿದೆ. ಲ್ಯಾಂಡರ್ ಕಾಲುಗಳ ಮೇಲಿನ ಸಂವೇದಕಗಳು ಚಂದ್ರನ ಮೇಲ್ಮೈ ಸ್ಪರ್ಶವನ್ನು ಅನುಭವಿಸಿದ ಕೂಡಲೇ ಇಂಜಿನ್‌ಗಳು ತನ್ನ ಕೆಲಸವನ್ನು ಸ್ಥಗಿತಗೊಳಿಸುತ್ತದೆ.
ರೆಗೊಲಿತ್ ಎಂದು ಕರೆಯಲ್ಪಡುವ ಚಂದ್ರನ ಧೂಳನ್ನು ಲ್ಯಾಂಡಿoಗ್‌ನಿoದ ಹೊರಹಾಕಲಾಗುತ್ತದೆ ಮತ್ತು ದೂರ ಸರಿಯಲು ಮತ್ತು ನೆಲೆಗೊಳ್ಳಲು ಸಹಾಯವಾಗುತ್ತದೆ. ಬಳಿಕ ವಿಕ್ರಮ್ ಲ್ಯಾಂಡರ್ ತನ್ನ ರ್ಯಾಂಪ್ ಅನ್ನು ತೆರೆಯುತ್ತದೆ. ನಂತರ ಅದರಿಂದ ಪ್ರಗ್ಯಾನ್ ರೋವರ್ ನಿಧಾನವಾಗಿ ಕೆಳಕ್ಕೆ ಉರುಳಲಿದೆ. ಒಮ್ಮೆ ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈಯನ್ನು ತಲುಪಿದಾಗ, ರೋವರ್ ಚಂದ್ರನ ಮೇಲ್ಮೈಯ ಸುತ್ತಲೂ ಚಲಿಸಲು ಮುಕ್ತವಾಗಿರುತ್ತದೆ.
ವಿಕ್ರಮ್ ಲ್ಯಾಂಡರ್‌ನಲ್ಲಿರುವ ಪ್ರಗ್ಯಾನ್ ರೋವರ್ ಚಿತ್ರಗಳನ್ನು ತೆಗೆದುಕೊಳ್ಳುವಾಗ ಭಾರತ ಈವರೆಗೂ ಕಾದಿದ್ದ ಅತಿದೊಡ್ಡ ಕ್ಷಣವು ಆಗಮಿಸಿದಂತಾಗುತ್ತದೆ. ಚಂದ್ರನ ಮೇಲ್ಮೈಯಿಂದ ಭಾರತದ ಮೊದಲ ಫೋಟೋಗಳನ್ನು ಪ್ರಗ್ಯಾನ್ ರೋವರ್ ಕಳುಹಿಸಲಿದೆ. ವಿಕ್ರಮ್ ಲ್ಯಾಂಡರ್ ಮತ್ತು ರೋವರ್ ಎರಡೂ ಸೌರಶಕ್ತಿಯಿಂದ ಚಾಲಿತವಾಗಿವೆ ಮತ್ತು ಒಂದು ಚಂದ್ರನ ಒಂದು ದಿನಕ್ಕೆ ಬಾಳಿಕೆ ಬರುವಂತೆ ತಯಾರಿಸಲಾಗಿದೆ. ಚಂದ್ರನ ಒಂದು ದಿನ ಭೂಮಿಯ 14ದಿನಗಳಿಗೆ ಸಮಾನವಾಗಿದೆ.
ಸದ್ಯ ಭಾರತ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಮಾಡುವ ಮೂಲಕ ಇತಿಹಾಸ ಬರೆಯಲು ಸಜ್ಜಾಗಿದೆ. ವಿಕ್ರಮ್ ಲ್ಯಾಂಡರ್‌ನ ಒಳಗಿರುವ ಪ್ರಗ್ಯಾನ್ ರೋವರ್ ಚಂದ್ರನ ಅಂಗಳಕ್ಕೆ ಇಳಿದು ತನ್ನ ಚಮತ್ಕಾರ ಪ್ರದರ್ಶಿಸಲು ಸಜ್ಜಾದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಇಡೀ ಭಾರತವೇ ಎದುರು ನೋಡುತ್ತಿದೆ. ಒಂದು ವೇಳೆ ಚಂದ್ರನ ದಕ್ಷಿಣ ಧ್ರವದಲ್ಲಿ ಚಂದ್ರಯಾನ ನೌಕೆ ಲ್ಯಾಂಡ್ ಆದರೆ, ಭಾರತದ ಪಾಲಿಗೆ ಸುವರ್ಣ ಯುಗವಾಗಲಿದೆ. ಏಕೆಂದರೆ ಈವರೆಗೂ ಯಾವುದೇ ದೇಶ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿಲ್ಲ. ಇಲ್ಲಿ ಲ್ಯಾಂಡ್ ಆಗುವುದು ತುಂಬಾ ಕಷ್ಟವೆಂದು ಹೇಳಲಾಗಿದೆ. ಇನ್ನು ಅಮೆರಿಕ, ರಷ್ಯಾ, ಫ್ರಾನ್ಸ್ ಮತ್ತು ಚೀನಾ ಈಗಾಗಲೇ ಚಂದ್ರನ ಅಂಗಳಕ್ಕೆ ಇಳಿದಿವೆ. ಆದರೆ, ದಕ್ಷಿಣ ಧ್ರುವದಲ್ಲಲ್ಲ. ಆದರೆ, ಭಾರತದ ಯಶಸ್ವಿಯಾದರೆ, ಈ ರಾಷ್ಟ್ರಗಳ ಸಾಲಿಗೆ ಸೇರುವುದಲ್ಲದೆ, ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಮಾಡಿದ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಸಾಧಿಸಲಿದೆ.