ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆ.ಎಸ್.ಆರ್.ಟಿ.ಸಿ ರಾಜ್ಯದ ಅμÉ್ಟೀ ಅಲ್ಲ, ದೇಶದ ಒಂದು ಅತ್ಯಂತ ಸುರಕ್ಷಿತ ಸಾರಿಗೆ ಸಂಸ್ಥೆ. ಇಷ್ಟು ದಿನ ಮನುಷ್ಯರನ್ನು ಮತ್ತು ಒಂದು ಊರಿನಿಂದ ಇನ್ನೊಂದು ಊರಿಗೆ ಜನರ ಜತೆ ಅವರ ಕನಸುಗಳನ್ನು ಕೂಡಾ ಹೊತ್ತು ತಿರುಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸುಗಳು ಇನ್ನು ಮುಂದೆ ಲಗೇಜ್ ಹೊತ್ತು ತಿರುಗಲು ರೆಡಿಯಾಗಿವೆ. ಹೌದು ಇನ್ಮುಂದೆ ಕೆ.ಎಸ್.ಆರ್.ಟಿ.ಸಿ ಲಾರಿಗಳು ರಸ್ತೆ ಗಿಳಿಯಲಿವೆ ಕೆ.ಎಸ್.ಆರ್.ಟಿ.ಸಿ ಲಾಜಿಸ್ಟಿಕ್ ಸಂಸ್ಥೆ ಅಸ್ತಿತ್ವಕ್ಕೆ ಬರಲು ಸಕಲ ತಯಾರಿ ನಡೆದಿದೆ.
ರಾಜ್ಯದಲ್ಲಿ ಶಕ್ತಿ ಯೋಜನೆಗೆ ಬಲ ತುಂಬಿದ ನಂತರ ಮಹಿಳೆಯರು ಖುಷಿಯಲ್ಲಿ ಉಚಿತವಾಗಿ ಊರೂರು ತಿರುಗಾಡುತ್ತಿದ್ದಾರೆ. ಇದು ಸಂಸ್ಥೆ ಮೇಲೆ ಒಂದಷ್ಟು ಹಣಕಾಸಿನ ಒತ್ತಡ ಉಂಟಾಗಿದೆ. ಈ ನಿಟ್ಟಿನಲ್ಲಿ ಕೆ.ಎಸ್.ಆರ್.ಟಿ.ಸಿಗೆ ಇನ್ನಷ್ಟು ಆರ್ಥಿಕ ಸಂಪನ್ಮೂಲಗಳನ್ನು ಒದಗಿಸಿಕೊಡುವ ಕಾರಣದಿಂದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮ ತನ್ನ ವ್ಯಾಪ್ತಿಯಲ್ಲಿ ಲಾರಿ ಕೊಳ್ಳಲು ತಯಾರಿ ನಡೆಸಿದೆ. ಆ ಮೂಲಕ ಕೊರಿಯರ್ ಮತ್ತು ಲಗ್ಗೇಜ್ ಗಳನ್ನು ರಾಜ್ಯ ವ್ಯಾಪಿ ಸಾಗಣೆ ಮಾಡಲು ಚಿಂತನೆ ನಡೆಸಿದೆ.
ಈಗ ಕೇವಲ ಬಸ್ಸಿನಲ್ಲಿ ಚಲಿಸುವ ಪ್ರಯಾಣಿಕರಿಗೆ ಮಾತ್ರ ಪಾರ್ಸೆಲ್ ಮತ್ತು ಇತರ ಸರಕು ಸಾಗಣೆಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಅದರಿಂದ ವಾರ್ಷಿಕವಾಗಿ ಬರುವ ಆದಾಯ ಅತ್ಯಂತ ಕಡಿಮೆಯಾಗಿದೆ. ಇತ್ತೀಚೆಗೆ ಸರಕು ಸಾಗಾಣಿಕೆ ವ್ಯವಹಾರ ಎಲ್ಲಾ ಕಡೆಯೂ ಜೋರಾಗಿ ನಡೆಯುತ್ತಿದ್ದು ಪ್ರತಿಷ್ಠಿತ ಸಂಸ್ಥೆಯಾದ ಕೆ ಎಸ್ ಆರ್ ಟಿ ಸಿ ಸಾಗಾಣಿಕಾ ಕ್ಷೇತ್ರಕ್ಕೆ ಲಗ್ಗೆ ಇಡುವ ಯೋಜನೆ ಹಾಕಿಕೊಂಡಿದೆ. ಈ ಮೂಲಕ ವಾರ್ಷಿಕವಾಗಿ ಕನಿಷ್ಠ 100 ಕೋಟಿ ಗಳಿಸುವ ಪ್ಲಾನ್ ಕೆ.ಎಸ್.ಆರ್.ಟಿ.ಸಿ.ದ್ದಾಗಿದೆ.
ರಾಜ್ಯದಾದ್ಯಂತ ಮತ್ತು ದೇಶದ ಹಲವು ಕಡೆಗಳಿಗೆ ಕೂಡ ತನ್ನ ನೆಟ್ವರ್ಕ್ ಅನ್ನು ಬೃಹತ್ ಆಗಿ ವ್ಯಾಪಿಸಿರುವ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯಲ್ಲಿ ಲಕ್ಷಾಂತರ ಉದ್ಯೋಗಿಗಳಿದ್ದಾರೆ. ಹಲವಾರು ಸಾವಿರ ಡ್ರೈವರ್ ಗಳು ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳೆಯ ಬಸ್ಸುಗಳನ್ನು ಮಾರ್ಪಾಡು ಮಾಡಿ ಇರುವ ಸಿಬ್ಬಂದಿಗಳನ್ನು ಸದ್ಬಳಕೆ ಮಾಡಿಕೊಂಡು, ಅಗತ್ಯ ಬಿದ್ದರೆ ಹೊಸಬರನ್ನು ನೇಮಕಾತಿ ಮಾಡಿಕೊಂಡು ಕೆ.ಎಸ್.ಆರ್.ಟಿ.ಸಿ ಲಾಜಿಸ್ಟಿಕ್ ಸೇವೆ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎನ್ನಲಾಗಿದೆ. ಮುಂದೊಂದು ದಿನ ಸರ್ಕಾರಿ ನಿಯಂತ್ರಿತ ಈ ಸಂಸ್ಥೆ ವಿಆರ್’ಎಲ್ ನಂತಹ ಲಾಜಿಸ್ಟಿಕ್ ವ್ಯವಸ್ಥೆಗೆ ಒಗ್ಗಿಕೊಂಡು, ಈ ಮೂಲಕ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.