ಉಡುಪಿ : ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ‘ಕಪ್ಪು ಉಡುಪಿನಲ್ಲಿ ಮಹಿಳೆಯರು’ಎಂಬ ವಿಶಿಷ್ಟವಾದ ಮೌನ ಪ್ರತಿಭಟನೆಯನ್ನು ಮದರ್ ಆಫ್ ಸಾರೋಸ್ ಚರ್ಚ್ ಎದುರು ಇರುವ ಕೆಎಂ ಮಾರ್ಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಒಕ್ಕೂಟದ ಸದಸ್ಯರು ಹಾಗು ಸಮಾನ ಮನಸ್ಕ ಬೆಂಬಲಿಗರು ಕಪ್ಪುವಸ್ತ್ರ ಧರಿಸಿ ಹಾಗೂ ಕಪ್ಪು ಪಟ್ಟಿ ಕಟ್ಟಿಕೊಂಡು ಕೈಯಲ್ಲಿ ಪೋಸ್ಟರ್ಗಳನ್ನು ಹಿಡಿದು, ಸಾಲಾಗಿ ನಿಂತು ಮಹಿಳೆಯರ ಮೇಲೆ ನಡೆಯುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳನ್ನು ಖಂಡಿಸಿದರು. ಒಕ್ಕೂಟದ ಪ್ರಮುಖರಾದ ಲೇಖಕಿ, ಕವಯತ್ರಿ ಡಾ.ಎಚ್.ಎಸ್.ಅನುಪಮಾ ಮಾತನಾಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ತುಳು ಅಕಾಡೆಮಿ ಮಾಜಿ ಅಧ್ಯಕ್ಷೆ, ಲೇಖಕಿ ಜಾನಕಿ ಬ್ರಹ್ಮಾವರ, ಹಿರಿಯ ಚಿಂತಕ ಪ್ರೊ.ಫಣಿರಾಜ್, ಫಾ.ವಿಲಿಯಂ ಮಾರ್ಟಿಸ್ ಮೊದಲಾದವರು ಉಪಸ್ಥಿತರಿದ್ದರು.