Recent Posts

Monday, January 20, 2025
ಸುದ್ದಿ

ನಿಯಂತ್ರಣ ತಪ್ಪಿ ಖಾಸಗಿ ಬಸ್ ಪ್ರಪಾತಕ್ಕೆ: ಇಬ್ಬರು ಸ್ಥಳದಲ್ಲೇ ಸಾವು – ಕಹಳೆ ನ್ಯೂಸ್

ಚಾಮರಾಜನಗರ: ಕರ್ನಾಟಕ-ತಮಿಳುನಾಡು ಗಡಿ ಭಾಗದ ದಿಂಬಮ್​ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪ್ರಪಾತಕ್ಕೆ ಉರುಳಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ.

ಈರೋರಿನ ಎ.ಮುತ್ತು(60), ಗುರುಸ್ವಾಮಿ(45) ಮೃತರೆಂದು ಗುರುತಿಸಲಾಗಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಮೈಸೂರಿನಿಂದ ಈರೋಡ್​ಗೆ ತೆರಳುತ್ತಿದ್ದಾಗ 26ನೇ ತಿರುವಿನಲ್ಲಿ ನೂರು ಅಡಿ ಆಳದ ಪ್ರಪಾತಕ್ಕೆ ಬಸ್​ ಬಿದ್ದಿದೆ. ಐವರ ಸ್ಥಿತಿ ಗಂಭೀರ ಎಂದು ತಿಳಿದುಬಂದಿದ್ದು, ಚಾಲಕ, ಮೂವರು ಮಹಿಳೆಯರು ಸೇರಿದಂತೆ 19 ಪ್ರಯಾಣಿಕರಿಗೆ ಗಾಯಗಳಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಾಯಗೊಂಡವರನ್ನು ಈರೋಡು ಜಿಲ್ಲೆಯ ಸತ್ಯಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಕೊಯಮತ್ತೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಸನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.