ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ) ಬಾಳ್ತಿಲ ಮತ್ತು ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿ ವತಿಯಿಂದ, “ವನಮಹೋತ್ಸವ” ಕಾರ್ಯಕ್ರಮ – ಕಹಳೆ ನ್ಯೂಸ್
ಬಂಟ್ವಾಳ : ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಬಾಳ್ತಿಲ ಮತ್ತು ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿ ವತಿಯಿಂದ, “ವನಮಹೋತ್ಸವ” ಕಾರ್ಯಕ್ರಮ ಬಾಳ್ತಿಲದಲ್ಲಿ ನಡೆಯಿತು.
ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಸಂಸ್ಥಾಪಕರು, ಕರ್ನಾಟಕ ಸರಕಾರದ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು, ನ್ಯಾಯವಾದಿ, ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷರು ಶ್ರೀಮತಿ ಶೈಲಜಾ ರಾಜೇಶ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಂದಿನ ಪೀಳಿಗೆಯ ಮಕ್ಕಳು ನಾಡು ಮತ್ತು ಕಾಡು ಮಹತ್ವವನ್ನು ಅರಿತು ಕಾಡನ್ನು ಬೆಳೆಸಿ ನಾಡನ್ನು ಉಳಿಸುವ ಕಾಯಕದಲ್ಲಿ ತೊಡಗಬೇಕು.ಎಂದು ಹಿತ ಹಾರೈಸಿದರು.
ಕಾರ್ಯಕ್ರಮದಲ್ಲಿ ಬಿಲ್ಲವ ಮಹಿಳಾ ಸಮಿತಿ ಕಾರ್ಯದರ್ಶಿ ಶ್ರೀಮತಿ ಸರೋಜಿನಿ ಮಾರಪ್ಪ ಪೂಜಾರಿ, ಖಜಾಂಚಿ ಶ್ರೀಮತಿ ಸುಜಾತಾ ದಿನೇಶ್, ವಾತ್ಸಲ್ಯಮಯಿ ಸಂಸ್ತೆಯ ಟ್ರಸ್ಟಿ ಡಾ. ರಾಜೇಶ್ ಪೂಜಾರಿ, ಸದಸ್ಯರಾದ ಭಾಸ್ಕರ್ ಪೆರ್ನೆ, ವಿನಯ, ಯಶೋಧಾ, ಭಾರತಿ, ಶ್ರೀಶೈಲ ಕಲಾ ನೃತ್ಯ ತಂಡದ ವಿದ್ಯಾರ್ಥಿಗಳು ಸಾನ್ವಿ, ಆಶ್ರಯ, ಸಮನ್ವಿತಾ, ಶ್ರೇಷ್ಟ ಎಸ್ ಆರ್, ದಯಾನೀತ್, ಸಾಕ್ಷಿ ಉಪಸ್ಥಿತರಿದ್ದರು.
ಬಾಳ್ತಿಲದಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವ ಆಚರಣೆ ನಡೆಸಲಾಯಿತು. ಶೌರ್ಯ ನಿರೂಪಿಸಿದರು ಸರೋಜಿನಿ ಸ್ವಾಗತಿಸಿ, ಸುಜಾತ ವಂದಿಸಿದರು.