Sunday, November 24, 2024
ಸುದ್ದಿ

ಮೂಡುಬಿದಿರೆ ನೂತನ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡ ಖಡಕ್ ಖಾಕಿ ಖ್ಯಾತಿಯ ಸಂದೇಶ್ ಪಿ. ಜಿ. – ಕಹಳೆ ನ್ಯೂಸ್

ಮೂಡುಬಿದಿರೆ : ತನ್ನ ಕರ್ತವ್ಯದ ಮೂಲಕ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ‘ಖಡಕ್ ಖಾಕಿ’ ಎಂದೇ ಕರೆಸಿಕೊಂಡಿರುವ ಸಂದೇಶ್ ಪಿ. ಜಿ. ಅವರು ಮೂಡುಬಿದಿರೆಯ ನೂತನ ಇನ್ಸ್ ಪೆಕ್ಟರ್ ಆಗಿ ನೇಮಕರಾಗಿದ್ದಾರೆ.

ಕಳೆದ ಹಲವು ಸಮಯಗಳಿಂದ ಮೂಡುಬಿದಿರೆ ಇನ್ಸ್ ಪೆಕ್ಟರ್ ಆಗಿ ಸಂದೇಶ್ ಅವರು ಬರುತ್ತಾರೆನ್ನುವ ಮಾಹಿತಿ ಇತ್ತಾದರೂ ಇಂದು ಅದು ಅಧಿಕೃತಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ ಕಾರ್ಕಳ, ಬೆಳ್ತಂಗಡಿ, ಬಜ್ಪೆ ಹಾಗೂ ಇನ್ನಿತರ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಸಂದೇಶ್ ಅವರು ತಮ್ಮ ದಕ್ಷತೆಯ ಕರ್ತವ್ಯದ ಮೂಲಕ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದರು. ಯಾರೊಂದಿಗೂ ರಾಜಿ ಮಾಡಿಕೊಳ್ಳದೆ ಕಾನೂನು ಹೇಗಿದೆಯೋ ಅದನ್ನು ಪಾಲಿಸಿ ಕೊಂಡು ಬಂದು, ಕಾನೂನಿಗೆ ಭಂಗತರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಸಂದೇಶ್ ಅವರ ಸ್ವಭಾವ. ಇದೇ ಕಾರಣಕ್ಕೆ ಕಳ್ಳರು, ದರೋಡಕೋರರು, ಕಾನೂನು ಕೈಗೆತ್ತಿಕೊಳ್ಳುವವರಿಗೆ ಸಿಂಹಸ್ವಪ್ನರಾಗಿದ್ದಾರೆ.
ಇಂತಹ ದಕ್ಷ ಅಧಿಕಾರಿ ಮೂಡುಬಿದಿರೆಗೊಮ್ಮೆ ಬರಲೇ ಬೇಕೆನ್ನುವುದು ಈ ಭಾಗದ ಜನರ ಆಶಯವಾಗಿತ್ತು. ಇದೀಗ ಓರ್ವ ನಿಷ್ಠಾವಂತ, ದಕ್ಷ ಅಧಿಕಾರಿ ಮೂಡುಬಿದಿರೆಯ ಇನ್ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡುಬಿದಿರೆಗೆ ಸಂದೇಶ್ ರಂತಹ ಖಡಕ್ ಅಧಿಕಾರಿಯ ಅವಶ್ಯವಿತ್ತು. ಇನ್ನು ಕೆಲವು ಕ್ರೈಮ್, ಅಕ್ರಮ ಚಟುವಟಿಕೆಗಳು, ಮಾದಕ ವ್ಯಸನಿಗಳಿಗೆ, ಉಂಡಾಡಿಗುಂಡರಾಗಿ ಕಾನೂನು ಕೈಗೆತ್ತಿಕೊಳ್ಳುವವರಿಗೆ ಮೂಡುಬಿದಿರೆಯಲ್ಲಿ ಖಂಡಿತ ಅವಕಾಶ ವಿಲ್ಲ ಎನ್ನುವ ಅಭಿಪ್ರಾಯಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಮೂಡುಬಿದಿರೆಯಲ್ಲಿ ಇನ್ಸ್ ಪೆಕ್ಟರ್ ಆಗಿರುವ ನಿರಂಜನ್ ಅವರು ಸಕಲೇಶಪುರ ಗ್ರಾಮಾಂತರ ಇನ್ಸ್ಪೆಕ್ಟರ್ ಆಗಿ ವರ್ಗಾ ವಣೆಗೊಂಡಿದ್ದಾರೆ.