ಅಸ್ತು ಎಂದ ಮುಕ್ಕೋಟಿ ದೇವತೆಗಳು : ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-೩ ಯಶಸ್ವಿ ಲ್ಯಾಂಡಿಂಗ್ –ಕಹಳೆ ನ್ಯೂಸ್
ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ ೩ರ ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿAಗ್ ಆಗಿದೆ. ದೇಶದ ಉದ್ದಗಲಕ್ಕೂ ಜನ ಚಂದ್ರಯಾನ ೩ರ ಯಶಸ್ಸಿಗೆ ಶುಭ ಕೋರಿ ಶುಭಹಾರೈಸಿದ್ದರು. ಎಲ್ಲರ ಹಾರೈಕೆಗೆ ಮುಕ್ಕೋಟಿ ದೇವತೆಗಳು ಅಸ್ತು ಎಂದಿದ್ದು, ವಿಜ್ಞಾನಿಗಳ ಪ್ರಯತ್ನ ಕೈ ಗೂಡಿದೆ. ಚಂದ್ರಯಾನ ೩ ಯಶಸ್ವಿಯಾಗಿದೆ.
ಈಗಾಗಲೇ ಚಂದ್ರನ ಮೇಲೆ ಸೋವಿಯತ್ ಒಕ್ಕೂಟ, ಚೀನಾ, ಅಮೆರಿಕ ಪುಟ್ಟ ಗಗನನೌಕೆಯನ್ನು ಸಾಫ್ಟ್ ಲ್ಯಾಂಡಿAಗ್ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಇಲ್ಲಿಯವರೆಗೆ ಯಾವುದೇ ಮಿಷನ್ ಲ್ಯಾಂಡ್ ಆಗಿರಲಿಲ್ಲ. ಚಂದ್ರನ ಇನ್ನೊಂದು ಮುಖ ಅಥವಾ ಭೂಮಿಗೆ ಕಾಣಿಸದ ಚಂದ್ರನ ಇನ್ನೊಂದು ಭಾಗದಲ್ಲಿ ಲ್ಯಾಂಡರ್ ಇಳಿಸುವ ಪ್ರಯತ್ನವನ್ನು ಇಸ್ರೋ ಮಡಿ ಯಶಸ್ವಿಯಾಗಿದೆ. ಅಲ್ಲಿ ಹೀಲಿಯಂ ಇರಬಹುದು, ನೀರು ಇರಬಹುದು ಇತ್ಯಾದಿ ಪ್ರಶ್ನೆಗಳಿಗೆ ಉತ್ತರವನ್ನ ನಮ್ಮ ಇಸ್ರೋ ನೀಡಲಿದೆ.