Thursday, January 23, 2025
ಸುದ್ದಿ

ಚಂದ್ರನ ಅಂಗಳಕ್ಕೆ ವಿಕ್ರಮ : ಸಂತಸ ಹಂಚಿಕೊಂಡು, ವಿಜ್ಞಾನಿಗಳಿಗೆ ಅಭಿನಂದಿಸಿದ ಡಾ. ಡಿ. ವೀರೇಂದ್ರ ಹೆಗ್ಗಡೆ – ಕಹಳೆ ನ್ಯೂಸ್

ಬೆಳ್ತಂಗಡಿ: “ವಿಕ್ರಮ್ ಚಂದ್ರನ ಅಂಗಳಕ್ಕೆ ಕಾಲಿಡುವ ಅಂತಿಮ ಹಾಗೂ ರೋಚಕ ಕ್ಷಣಗಳನ್ನು ನಾನು ಕೂಡಾ ಅತ್ಯಂತ ಕುತೂಹಲ ಮತ್ತು ಆಸಕ್ತಿಯಿಂದ ವೀಕ್ಷಿಸಿ ಸಂತಸ ಹಾಗೂ ಅಚ್ಚರಿ ಪಟ್ಟಿದ್ದೇನೆ”. ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯ ಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಸಂತಸ ಹಂಚಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

“ಈ ಯಶಸ್ಸಿಗೆ ಭಗೀರಥ ಪ್ರಯತ್ನ ಮಾಡಿದ ಬಾಹ್ಯಾಕಾಶ ವಿಜ್ಞಾನಿಗಳೆಲ್ಲರನ್ನೂ ನಾನು ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಇದೊಂದು ವಿಶ್ವದಾಖಲೆಯಾಗಿದ್ದು ಭಾರತದ ಕೀರ್ತಿ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಹೆಚ್ಚಾಗಿದೆ. ಚಂದ್ರನನ್ನು ಈ ಸಂಭ್ರಮ – ಸಡಗರದ ಸಂದರ್ಭದಲ್ಲಿ ಸ್ಮರಿಸಿ ದೂರದಿಂದಲೇ ಪರಿಚಯವಾದ ಚಂದ್ರನನ್ನು ಅತೀ ಸಮೀಪಕ್ಕೆ ತಂದ ಎಲ್ಲಾ ಬಾಹ್ಯಾಕಾಶ ವಿಜ್ಞಾನಿಗಳನ್ನು ಮತ್ತು ತಂತ್ರಜ್ಞರನ್ನು ಹಾರ್ದಿಕವಾಗಿ ಅಭಿನಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು