Thursday, January 23, 2025
ಪುತ್ತೂರು

ಪುತ್ತೂರು: ಡಿ.ಸಿ.ಸಿ ಬ್ಯಾಂಕ್ ಗೆ ಸಾಲ ಮರುಪಾವತಿಯಾಗದೆ ಹರಾಜಾಗಿದ್ದ ದರ್ಬೆಯ ಕಟ್ಟಡ ಬಿಡ್ಡುದಾರ ಸಂಸ್ಥೆಗೆ ಹಸ್ತಾಂತರ – ಕಹಳೆ ನ್ಯೂಸ್

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪುತ್ತೂರು ಮುಖ್ಯ ಶಾಖೆಯಿಂದ ದರ್ಬೆ ಫೋರಮ್ ಹೈಟ್ಸ್, ಮೇಸರ್ಸ್ ಸಹದ್ ರೆಂಟಲ್ ಪ್ರೈ ಲಿ. ಅವರು ಪಡೆದ ಸಾಲವನ್ನು ನಾಲ್ಕೈದು ವರ್ಷದಿಂದ ಮರುಪಾವತಿಸಿಲ್ಲ ಎಂದು ಕಾನೂನಾತ್ಮಕವಾಗಿ ಕಟ್ಟಡವನ್ನು ಸೀಜ್ ಮಾಡುವ ನಿಟ್ಟಿನಲ್ಲಿ ಬ್ಯಾಂಕ್ ನಿರ್ದೇಶಕರು ಮತ್ತು ಅಧಿಕಾರಿ ವರ್ಗದವರು ಸ್ಥಳಕ್ಕೆ ಆಗಮಿಸಿದ ವೇಳೆ ಕಟ್ಟಡಕ್ಕೆ ಸಂಬAಧಿಸಿದವರ ಜೊತೆ ಮಾತಿನ ಚಕಮಕಿ ನಡೆದು ಬಳಿಕ ಬ್ಯಾಂಕ್ ನಿರ್ದೇಶಕರಾದ ಶಶಿ ಕುಮಾರ್ ರೈ ಬಾಲ್ಯೊಟ್ಟು ರವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಜೊತೆಗೂಡಿ ಕಟ್ಟಡಕ್ಕೆ ಸಂಬAಧಿಸಿದವರ ಮನೆ ಮಹಜರು ನಡೆಸಿ ಸೀಜ್ ಮಾಡಿ ತೆರಳಿದ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು, ಜು.23 ರಂದು ಬ್ಯಾಂಕ್ ನಿರ್ದೇಶಕರ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಜೊತೆಗೂಡಿ ಕಟ್ಟಡವನ್ನು ಸ್ವಾಧೀನ ಪಡೆದುಕೊಂಡ ಘಟನೆ ನಡೆಯಿತು.

ಸಹದ್ ರೆಂಟಲ್ ಪ್ರೈವೇಟ್ ಲಿಮಿಟೆಡ್ ಅವರು ಸಹಕಾರಿ ಬ್ಯಾಂಕ್ ಪುತ್ತೂರು ಮುಖ್ಯ ಶಾಖೆಯಿಂದ ಪಡೆದ ಸಾಲವನ್ನು ಮರುಪಾವತಿಸಿಲ್ಲ ಎಂದು 2022ರ ಅ.28 ರಂದು ಕಟ್ಟಡವನ್ನು ಬಹಿರಂಗವಾಗಿ ಹರಾಜು ಮಾಡಲಾಗಿತ್ತು. ಅದರಲ್ಲಿ ಬಿಡ್ಡುದಾರರಾಗಿ ಮಂಗಳೂರಿನ ರಿಯಲ್ ಎಸ್ಟೇಟ್ ಡೆವೆಲಪರ್ಸ್ ಅವರು 13.5 ಕೋಟಿ ರೂಪಾಯಿಗಳಿಗೆ ಸ್ಥಿರಾಸ್ಥಿಯನ್ನು ಖರೀದಿ ಮಾಡಿದ್ದರು. ಇದನ್ನು 2022ರ ಡಿಸೆಂಬರ್ 22ರಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಮತ್ತು ವಸೂಲಾತಿ ಅಧಿಕಾರಿಗಳ ನ್ಯಾಯಾಲಯದಲ್ಲಿ ಮಾರಾಟ ಸ್ಥಿರೀಕರಣ ಆದೇಶ ನೀಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಡಿ.26ರಂದು ಪುತ್ತೂರು ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಮಂಗಳೂರಿನ ರಿಯಲ್ ಎಸ್ಟೇಟ್ ಡೆವೆಲಪರ್ಸ್ ಅವರ ಹೆಸರಿಗೆ ನೋಂದಣಿ ಮಾಡಲಾಗಿತ್ತು. ಆ.23 ರಂದು ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರು ಪೊಲೀಸ್ ಇಲಾಖೆಯ ಜೊತೆಗೂಡಿ ಕಟ್ಟಡವನ್ನು ಸ್ವಾಧೀನ ಪಡಿಸಿಕೊಂಡು ಬಳಿಕ ಮಂಗಳೂರು ಡೆವೆಲಪರ್ಸ್ ನವರಿಗೆ ಕೀ ಹಸ್ತಾಂತರಿಸಿದರು.
ಬಿಲ್ಡಿAಗ್ ನಲ್ಲಿದ್ದ ಜನರು ಹಾಗೂ ಮಳಿಗೆಗಳಲ್ಲಿದ್ದವರನ್ನು ಮತ್ತು ಅವರ ಸಾಮಗ್ರಿಗಳನ್ನು ಹೊರಗಿಡಲು ಸೂಚಿಸಿ ಬಳಿಕ ಕಟ್ಟಡದ ಕೆಲ ಮಳಿಗೆ ಬೀಗ ಹಾಕಲಾಯಿತು..