Thursday, January 23, 2025
ಸುದ್ದಿ

ನಿಧಿ ಆಸೆಗಾಗಿ ಜ್ಯೋತಿಷಿಯ ಮಾತು ನಂಬಿ ಮನೆಯೊಳಗೆ 20 ಅಡಿ ಆಳದ ಗುಂಡಿ ತೋಡಿದ ಮಹಿಳೆ – ಕಹಳೆ ನ್ಯೂಸ್

ಚಾಮರಾಜನಗರ : ಮಹಿಳೆಯೊಬ್ಬರು ನಿಧಿ ಆಸೆಗಾಗಿ ಜ್ಯೋತಿಷಿಯ ಮಾತು ನಂಬಿ ಮನೆಯೊಳಗೆ ಬರೋಬ್ಬರಿ 20 ಅಡಿ ಆಳದ ಗುಂಡಿ ತೋಡಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಮನೆಯ ವಾಸ್ತು ಸರಿ ಇಲ್ಲ ಎಂದು ವಿ.ಎಸ್.ದೊಡ್ಡಿ ಗ್ರಾಮದ ಭಾಗ್ಯ ಪರಿಹಾರ ಕೇಳಲು ಜ್ಯೋತಿಷಿ ಬಳಿಗೆ ತೆರಳಿದ್ದರು. ಆಗ ಮನೆಯಲ್ಲಿ ನಿಧಿ ಇದೆ ಎಂದು ಜ್ಯೋತಿಷಿ ಹೇಳಿದ್ದು, ಇದಕ್ಕಾಗಿ ಮನೆಯಲ್ಲಿ ವಿಶೇಷ ಪೂಜೆ ಮಾಡಿಸಬೇಕೆಂದು ಹೇಳಿ ಮಹಿಳೆಯಿಂದ ಸಾವಿರಾರು ರೂ. ವಸೂಲಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಜ್ಯೋತಿಷಿ ಮನೆಯ ಒಳಗೆ 3 ಅಡಿ ಅಗಲದ 20 ಅಡಿ ಆಳದ ಗುಂಡಿ ತೋಡಿಸಿದ್ದಾರೆ. ವಿಷಯ ತಿಳಿದು ನೆರೆ ಮನೆಯವರು ರಾಮಾಪುರ ಪೆÇಲೀಸರಿಗೆ ದೂರು ನೀಡಿದ್ದು, ಪೆÇಲೀಸರು ಸ್ಥಳಕ್ಕೆ ತೆರಳುವಷ್ಟರಲ್ಲಿ ಜ್ಯೋತಿಷಿ ಪರಾರಿಯಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು