ಅಧ್ಯಯನಕ್ಕಾಗಿ ಸೌರ ಮಿಷನ್ ಆದಿತ್ಯ-ಎಲ್1 ಉಪಗ್ರಹ ಉಡಾವಣೆಯ ಯೋಜನೆಯಲ್ಲಿದೆ. ಬಹುತೇಕ ಸೆಪ್ಟೆಂಬರ್ ಮೊದಲ ವಾರದಲ್ಲಿ ಆದಿತ್ಯ-ಐ1 ಉಪಗ್ರಹ ಉಡಾವಣೆ ಮಾಡಲಿದ್ದೇವೆ. ಇದು ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ಉಪಗ್ರ ಎಂದು ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.
ಚಂದ್ರಯಾನ-3 ಯಶಸ್ವಿನ ಬೆನ್ನಲ್ಲೇ ಇಸ್ರೋ ಸೂರ್ಯನ ಅಧ್ಯಯನಕ್ಕಾಗಿ ಸೌರ ಮಿಷನ್ ಆದಿತ್ಯ-ಎಲ್1 ಉಪಗ್ರಹ ಉಡಾವಣೆಯ ಯೋಜನೆಯಲ್ಲಿದೆ. ಬಹುತೇಕ ಸೆಪ್ಟೆಂಬರ್ ಮೊದಲ ವಾರದಲ್ಲಿ ಆದಿತ್ಯ-L1 ಉಪಗ್ರಹ ಉಡಾವಣೆ ಮಾಡಲಿದ್ದೇವೆ. ಇದು ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ಉಪಗ್ರ ಎಂದು ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.
ಸೂರ್ಯನ ಶಕ್ತಿಶಾಲಿ ಕಿರಣಗಳನ್ನು ಅಧ್ಯಯನ ಮಾಡಲು ಇಸ್ರೋ ಆದಿತ್ಯ ಉಪಗ್ರಹ ರೆಡಿ ಮಾಡಿದೆ. PSLV-C57 ಅಥವಾ ಆದಿತ್ಯ ಐ1 ಸ್ಯಾಟಲೈಟ್ ಉಡಾವಣೆಗೆ ಸಜ್ಜಾಗಿದ್ದು ಇದರ ಬುನಾದಿ ಹಾಕಿದ್ದೇ ಬೆಂಗಳೂರಿನ ಯು.ಆರ್.ರಾವ್ ಸ್ಯಾಟಲೈಟ್ ಕೇಂದ್ರದಲ್ಲಿ ಎನ್ನುವುದು ವಿಶೇಷವಾಗಿದೆ. ಈಗಾಗಲೇ ಈ ಉಪಗ್ರಹವನ್ನು ಆಂಧ್ರದ ಶ್ರೀಹರಿಕೋಟಾ ಬಾಹ್ಯಾಕಾಶ ಉಡಾವಣಾ ಕೇಂದ್ರಕ್ಕೆ ರವಾನಿಸಲಾಗಿದೆ. ಎಲ್ಲ ಅಂದುಕೊoಡoತೆ ಆದರೆ ಮುಂದಿನ ತಿಂಗಳು ಉಡಾವಣೆ ಮಾಡಲಾಗುತ್ತದೆ.
PSLV-C57 ಅಥವಾ ಆದಿತ್ಯ L1 ಸ್ಯಾಟಲೈಟ್ ಸೂರ್ಯನನ್ನು ಅಧ್ಯಯನ ಮಾಡುವ ಇಸ್ರೋದ ಮೊದಲ ಕಾರ್ಯಾಚರಣೆ ಆಗಿದೆ. ಈ ಉಪಗ್ರಹ 1,500 ಕೆ.ಜಿ ತೂಕ ಇದ್ದು ಇದು ಭೂಮಿಯಿಂದ ಸೂರ್ಯನ ಕಡೆಗೆ 15 ಲಕ್ಷ ಕಿ.ಮೀ ದೂರದಲ್ಲಿರುವ ಲಾಗ್ರೇಂಜ್ ಪಾಯಿಂಟ್ 1 ರ ಕಕ್ಷೆಯಲ್ಲಿ ನೆಲೆಯಾಗಲಿದೆ. ಇಲ್ಲಿಂದ ಸೂರ್ಯನನ್ನು ಆದಿತ್ಯ ಅಧ್ಯಯನ ಮಾಡಲಿದೆ.