Thursday, January 23, 2025
ಸುದ್ದಿ

ಚಂದ್ರಯಾನ-3 ಬಗ್ಗೆ ವಿವಾದಿತ ಟ್ವೀಟ್ ಬಳಿಕ ಇಸ್ರೋ ಗೆ ಅಭಿನಂದನೆ ಸಲ್ಲಿಸಿದ ನಟ ಪ್ರಕಾಶ್ ರಾಜ್ – ಕಹಳೆ ನ್ಯೂಸ್

ಹೈದರಾಬಾದ್: ಕೋಟ್ಯಂತರ ಭಾರತೀಯರ ಕನಸು ಚಂದ್ರಯಾನ-3 ಯಶಸ್ವಿಯಾಗಿದೆ.ಚಂದ್ರನ ಮೇಲೆ ಲ್ಯಾಂಡರ್ ವಿಕ್ರಮ್ ನಿರೀಕ್ಷೆಯಂತೆ ಸಾಫ್ಟ್ ಲ್ಯಾಂಡ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಡೀ ದೇಶವೇ ಸಂಭ್ರಮಾಚರಣೆಯಲ್ಲಿ ಮುಳುಗಿದ್ದು, ವಿಶ್ವದ ನಾನಾಕಡೆಗಳಿಂದ ಭಾರತಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಮಹೋನ್ನತ ಸಾಧನೆಗೆ ಇಸ್ರೋ ವಿಜ್ಞಾನಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಂದ್ರಯಾನ3 ಯಶಸ್ಸಿನ ಬಳಿಕ ಬಹುಭಾμÁ ನಟ ಪ್ರಕಾಶ್ ರಾಜ್ ಟ್ವಿಟರ್ ಖಾತೆಯ ಮೂಲಕ ಇಸ್ರೋಗೆ ಅಭಿನಂದನೆ ತಿಳಿಸಿದ್ದು, ‘ಭಾರತದ ಮನುಕುಲದ ಹೆಮ್ಮೆಯ ಕ್ಷಣಗಳು, ಧನ್ಯವಾದಗಳು ಇಸ್ರೋ. ಸಾಧ್ಯವಾಗಿಸಿದ ಎಲ್ಲರಿಗೂ.. ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು.. ಸಂಭ್ರಮಿಸಲು ಇದು ದಾರಿಯಾಗಲಿ’ ಎಂದು ಬರೆದಿದ್ದಾರೆ.