Thursday, January 23, 2025
ಸುದ್ದಿ

ಬಂಟ್ವಾಳ : ಸ್ಕೂಟರ್ – ಕಾರು ನಡುವೆ ಮುಖಾಮುಖಿ ಡಿಕ್ಕಿ : ಸ್ಕೂಟರ್ ಸವಾರ ಗಂಭೀರ – ಕಹಳೆ ನ್ಯೂಸ್

ಬಂಟ್ವಾಳ : ಸ್ಕೂಟರ್ ಮತ್ತು ಕಾರುಗಳ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ತಾಲೂಕು ಸಜೀಪಮುನ್ನೂರು ಗ್ರಾಮದಲ್ಲಿ ನಡೆದಿದೆ.

ಅಬೂಬಕ್ಕರ್ ಕೋಡಿಜಾಲ್ ಎಂಬವರು ಗಾಯಗೊಂಡ ಸ್ಕೂಟರ್ ಸವಾರರಾಗಿದ್ದು, ಅವರು ಸ್ಕೂಟರ್ ನಲ್ಲಿ ಮೆಲ್ಕಾರ್ ನಿಂದ ಬರುತ್ತಿದ್ದ ವೇಳೆ ಕಂದೂರು ಎಂಬಲ್ಲಿ ಅಪಘಾತ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಬ್ರಾಹಿಂ ಅವರು ನರಿಕೊಂಬು ಎಂಬಲ್ಲಿ ಅಡಿಕೆ ತೋಟವೊಂದರ ಅಡಿಕೆಯ ವ್ಯವಹಾರ ಕುದುರಿಸಿದ್ದು, ಅಲ್ಲಿ ಹೋಗಿಬರುತ್ತಿದ್ದ ವೇಳೆ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಕಂದೂರು ಎಂಬಲ್ಲಿಗೆ ತಲುಪುತ್ತಿದ್ದಂತೆ ಮುಡಿಪು ಕಡೆಯಿಂದ ನಿರ್ಲಕ್ಷ್ಯತನದಿಂದ ಅತೀ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಸವಾರ ಅಬೂಬಕ್ಕರ್ ಕೋಡಿಜಾಲ್ ರವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.