Thursday, January 23, 2025
ಸುದ್ದಿ

ಪುತ್ತೂರಿನಲ್ಲಿ ಯುವತಿಗೆ ಚೂರಿ ಇರಿತ : ಮಹಿಳಾ ಪೊಲೀಸ್ ಸ್ಟೇಷನ್ ಬಳಿ ಘಟನೆ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಮಹಿಳಾ ಪೊಲೀಸ್ ಸ್ಟೇಷನ್ ಬಳಿಯೇ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬರು ಚೂರಿಯಿಂದ ಇರಿದಿರುವ ಘಟನೆ ನಡೆದಿದೆ.

ಪುತ್ತೂರು ಪೇಟೆಗೆ ಬಂದಿದ್ದ ಯುವತಿ ಪುತ್ತೂರಿನ ಮಹಿಳಾ ಪೊಲೀಸ್ ಸ್ಟೇಷನ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಏಕಾಏಕಿ ಬಂದ ಯುವಕನೊಬ್ಬ ಚೂರಿಯಿಂದ ಇರಿದಿದ್ದಾನೆ. ಮೂರರಿಂದ ನಾಲ್ಕು ಭಾರೀ ಚುರಿ ಇರಿದು ಕತ್ತುಗೆ ಸೀಳಿದ್ದಾನೆ. ಗಾಯಾಳು ಯುವತಿಯನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಯುವತಿಯ ಸ್ಧಿತಿ ಚಿಂತಾಜನಕವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಂಭೀರ ಗಾಯಗೊಂಡ ಯುವತಿಯನ್ನು ವಿಟ್ಲ ಮೂಲದ ಗೌರಿ (20) ಎನ್ನಲಾಗುತ್ತಿದ್ದು, ಕೊಲೆಗೆ ಯತ್ನಿಸಿದ ಯುವಕ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಚೂರಿ ಇರಿತಕ್ಕೆ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ..

ಜಾಹೀರಾತು
ಜಾಹೀರಾತು
ಜಾಹೀರಾತು