Friday, January 24, 2025
ಸುದ್ದಿ

ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆ; ಆಗಸ್ಟ್ 27ರಂದು ಜಗದೀಶ್ ಪುತ್ತೂರು ಯುಟ್ಯೂಬ್ ಚಾನಲ್‌ನಲ್ಲಿ ಹೊಸ ದಾಸರ ಪದ ವೀಡಿಯೋ ಆಲ್ಬಂ ಬಿಡುಗಡೆ –ಕಹಳೆ ನ್ಯೂಸ್

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಾಡಿನ ಎಲ್ಲಾ ಭಗವತ್ ಭಕ್ತರಿಗಾಗಿ ಪುತ್ತೂರು ಜಗದೀಶ್ ಆಚಾರ್ಯ ತಂಡದಿಂದ ವಿಶೇಷವಾದ ಭಜನೆ ಹಾಗೂ ಕುಣಿತ ಭಜನೆಗಾಗಿ ನಿರ್ಮಿತವಾದ ಹೊಸ ದಾಸರ ಪದ ವೀಡಿಯೋ ಆಲ್ಬಂ ಶ್ರೀಮತಿ ಸುಪ್ರೀತ ಮತ್ತು ಶ್ರೀ ಭರತ್ ಶೆಟ್ಟಿಗಾರ್ ಹಾಗೂ ಮಾಸ್ಟರ್ ಚಿರಾಗ್ ಸುರತ್ಕಲ್ ಇವರ ನಿರ್ಮಾಣ ದಲ್ಲಿ ಮೂಡಿ ಬಂದಿದೆ.


ಈ ಭಕ್ತಿಗೀತೆ ಇದೇ ಆಗಸ್ಟ್ 27ರಂದು ಆದಿತ್ಯವಾರ ಜಗದೀಶ್ ಪುತ್ತೂರು ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಗೊಳ್ಳಲಿದೆ.. ಈ ಹಾಡಿನ ಸಂಗೀತ ನಿರ್ದೇಶಕರಾಗಿ ಮತ್ತು ಗಾಯಕರಾಗಿ ಪುತ್ತೂರು ಜಗದೀಶ್ ಆಚಾರ್ಯ ಹಾಗೂ ಸಹ ಗಾಯಕಿಯರಾಗಿ ಸಮನ್ವಿ ರೈ ಮದಕ, ಜನ್ಯ ಪ್ರಸಾದ್ ಅನಂತಾಡಿ, ಅಶ್ವಿನಿ ಕೋಳಿಕ್ಕಜೆ, ತನುಶ್ರೀ ಮಂಗಳೂರು, ವೈಷ್ಣವಿ ಐ ಎಂ ಮಂಗಳೂರು, ದಿವ್ಯನಿಧಿ ರೈ ಎರುಂಬು, ಸಾಹಿತ್ಯ ಆಚಾರ್ಯ ಪುತ್ತೂರು, ಹಾಗೂ ಪುಟಾಣಿ ಕೃಷ್ಣನ ಪಾತ್ರದಲ್ಲಿ ಅವೀಶ್ ಎಸ್ ಶೆಟ್ಟಿ ಬಿಕರ್ನಕಟ್ಟೆ ಮಂಗಳೂರು, ಧನಿಶ್ಕ ,ಕೋಡಿಕೆರೆ ,ಸುರತ್ಕಲ್, ಸಾನಿಕ ಎಸ್ ಕಿದಿಯೂರು, ಮೇಹ ರೈ ಪುತ್ತೂರು,ಅರುಶಿ ,ಉಜಿರೆ, ಚುಕ್ಕಿ ವಿಟ್ಲ ಭಾಗವಹಿಸಿದ್ದಾರೆ. ಛಾಯಗ್ರಹಣದಲ್ಲಿ ಅರುಣ್ ರೈ, ಸಂಕಲನದಲ್ಲಿ ಚರಣ್ ಆಚಾರ್ಯ, ಶಿಶಿರ್ ರೈ ಚೆಲ್ಯಡ್ಕ ನಿರ್ವಹಿಸಿದ್ದಾರೆ. ಈ ವಿಡಿಯೋ ಅಲ್ಬಂ ನಾಡಿನ ಎಲ್ಲಾ ಸಮಸ್ತ ಭಜಕರಿಗಾಗಿ ಅರ್ಪಣೆ…

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು