Friday, January 24, 2025
ಸುದ್ದಿ

ಹೆತ್ತವರಿಗೆ ದೂರು ನೀಡಿದ್ದಕ್ಕೆ ಲಾಂಗ್ ಹಿಡಿದುಕೊಂಡು ಬಂದು ಉಪನ್ಯಾಸಕರನ್ನು ಬೆದರಿಸಿದ ವಿದ್ಯಾರ್ಥಿ – ಕಹಳೆ ನ್ಯೂಸ್

ಮಂಡ್ಯ : ನಿಮ್ಮ ಮಗ ಕ್ಲಾಸಿಗೆ ಸರಿಯಾಗಿ ಬರುತ್ತಿಲ್ಲ ಎಂದು ಹೆತ್ತವರಿಗೆ ಹೇಳಿದ ಉಪನ್ಯಾಸಕರಿಗೆ ವಿದ್ಯಾರ್ಥಿಯೊಬ್ಬ ಲಾಂಗ್ ಹಿಡಿದುಕೊಂಡು ಬಂದು ಬೆದರಿಕೆ ಹಾಕಿದ ಘಟನೆ ಬಿ.ಜಿ.ನಗರದ ಡಿಪ್ಲೊಮೋ ಕಾಲೇಜಿನಲ್ಲಿ ನಡೆದಿದೆ.

ವಿದ್ಯಾರ್ಥಿಯ ಬಗ್ಗೆ ಹೆತ್ತವರಿಗೆ ದೂರು ನೀಡಿದ್ದಕ್ಕೆ ಉಪನ್ಯಾಸಕರನ್ನೇ ಬೆದರಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಿಷಯದ ಬಗ್ಗೆ ಉಪನ್ಯಾಸಕ ಚಂದನ್ ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ನಡುವೆ ಉದಯ್ ಗೌಡ ಪೋಷಕರೊಂದಿಗೆ ಬಂದು ಚಂದನ್ ಅವರಿಂದ ಕ್ಷಮೆಯಾಚಿಸಿದ್ದಾನೆ. ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಮುಂದೇನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು