Recent Posts

Monday, November 25, 2024
ಸುದ್ದಿ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಲಯನ್ಸ್ ಕ್ಲಬ್ ಬಂಟ್ವಾಳ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಬಂಟ್ವಾಳ ಸಹಭಾಗಿತ್ವದಲ್ಲಿ ಆರೋಗ್ಯ ಮಾಹಿತಿ ಕಾರ್ಯಗಾರ ಕಾರ್ಯಕ್ರಮ – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಲಯನ್ಸ್ ಕ್ಲಬ್ ಬಂಟ್ವಾಳ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಬಂಟ್ವಾಳ ಸಹಭಾಗಿತ್ವದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಅಧಿಕಾರಿ ವರ್ಗದವರಿಗೆ, ಎನ್ ಜಿ ಒ ಸದಸ್ಯರಿಗೆ, ಹಾಗೂ ವಸತಿ ನಿಲಯದ ಪಾಲಕರಿಗೆ ಆರೋಗ್ಯ ಮಾಹಿತಿ ಕಾರ್ಯಗಾರ. ಲಯನ್ಸ್ ಸೇವಾ ಭವನ ಬಿಸಿ ರೋಡ್ ಇಲ್ಲಿ ಜರಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪ್ರಶಾಂತ್ ಕೋಟ್ಯಾನ್ ವಹಿಸಿದ್ದರು.ಮುಖ್ಯ ಮಾಹಿತಿಗಾರರಾಗಿ ಆಗಮಿಸಿದ ಮಾಣಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ | ಶಶಿಕಲಾ ರವರು ಆರೋಗ್ಯ ಮಾಹಿತಿ ನೀಡಿ, ಜೀವನದ ಎಲ್ಲಾ ಏರುಪೇರುಗಳಿಗೆ, ಸುಖ ದುಖಃಗಳಿಗೆ, ಆರೋಗ್ಯ ಬಹು ಮುಖ್ಯ ಪಾತ್ರ ವಹಿಸುತ್ತದೆ, ಕಾಲ ಕಾಲಕ್ಕೆ ಆರೋಗ್ಯದ ತಪಾಸಣೆ ಮಾಡುತ್ತಿರಬೇಕು, ವೈಜ್ಞಾನಿಕ ಯುಗದಲ್ಲಿ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಆಚಾರ ವಿಚಾರಗಳನ್ನು ನಾವು ಮರೆತು ಯಾಂತ್ರಿಕ ಜೀವನ ಶೈಲಿಯಲ್ಲಿ ಪಡೆಯುತ್ತಿದ್ದೇವೆ ಇದರಿಂದ ವಯೋಸಹಜ ಕಾಯಿಲೆಗಳು ವಯಸ್ಸಿಗಿಂತ ಮೊದಲೇ ಬರುತ್ತಿವೆ, ಸ್ಪರ್ಧಾತ್ಮಕ ಜೀವನಶೈಲಿಯಿಂದ ವ್ಯಾಯಾಮ ಮರೆತು ಕೇವಲ ಬಾಹ್ಯ ಸೌಂದರ್ಯಕ್ಕೆ ಮರುಳಾಗಿ ಜೀವನ ರೋಗದಿಂದ ಬಳಲುತ್ತಿದ್ದಾರೆ ಇವೆಲ್ಲಕ್ಕೂ ವಿರುದ್ಧವಾಗಿ ಉತ್ತಮ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ಮಾನಸಿಕ ನೆಮ್ಮದಿ ದೊರಕುವ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಉತ್ತಮ ಬದಲಾವಣೆ ಕಾಣಲು ಸಾಧ್ಯ ಎಂದರು.

ಕಾಂiÀðಕ್ರಮದ ಬಳಿಕ ಇಲಾಖಾ ಸಿಬ್ಬಂದಿಗಳಿAದ ಹದಿಹರೆಯದ ಆರೋಗ್ಯ ಮಾಹಿತಿ, ಆಶಾ ಮತ್ತು ಆರೋಗ್ಯಕಾಯ9ಕತೆ9ಯವರ ಸೇವೆ, ಗಬಿ9ಣಿ ಸ್ತ್ರೀ ಗೆ ಸರಕಾರದಿಂದ ಸಿಗುವ ಸೌಲಭ್ಯಗಳು, ಕೆಟ್ಟ ಚಟಗಳಿಂದ ಕೌಟುಂಬಿಕ ಜೀವನದಲ್ಲಿ ನಡೆಯುವ ಅಹಿತಕರ ಘಟನೆಗಳ ಕುರಿತು ಕಿರು ಪ್ರಹಸನದ ಮೂಲಕ ತಿಳಿಸಿದರು.

ವೇದಿಕೆಯಲ್ಲಿ ಶಿಕ್ಷಣ ಸಂಯೋಜಕರಾದ ಪ್ರತಿಭಾ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿದ್ಯಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕುಸುಮ ಹಾಗೂ ಮಮತಾ ಉಪಸ್ಥಿತರಿದ್ದರು.