ಉಡುಪಿ ವಿಡಿಯೋ ಪ್ರಕರಣ : ಪ್ರಚೋದನಕಾರಿ ಭಾಷಣ ಆರೋಪ ಹೊತ್ತಿದ್ದ ಶರಣ್ ಪಂಪ್ವೆಲ್‌ಗೆ ರಿಲೀಪ್ : ಜಾಮೀನು ಮಂಜೂರು –ಕಹಳೆ ನ್ಯೂಸ್
ಉಡುಪಿ : ಉಡುಪಿ ಪ್ಯಾರಾ ಮೆಡಿಕಲ್ ಕಾಲೇಜು ವಿಡಿಯೋ ಪ್ರಕರಣದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಪ್ರಕರಣ ದಾಖಲಾಗಿದ್ದ ಶರಣ್ ಪಂಪ್ವೆಲ್‌ಗೆ ಜಾಮೀನು ಮಂಜೂರಾಗಿದೆ.
ಉಡುಪಿ ಪ್ಯಾರಾ ಮೆಡಿಕಲ್ ಕಾಲೇಜು ವಿಡಿಯೋ ಪ್ರಕರಣವನ್ನ ಖಂಡಿಸಿ ಆಗಸ್ಟ್ ೩ರಂದು ಬೃಹತ್ ಪ್ರತಿಭಟನೆ ಮಾಡಲಾಗಿತ್ತು. ಈ ವೇಳೆ ತಾಯಿಯಂದಿರು ಸೌಟು ಹಿಡಿಯುವ ಕೈಯಲ್ಲಿ ಕತ್ತಿ, ತಲಾವಾರು ಹಿಡಿಯುವ ಮೂಲಕ ಹಿಂದೂ ಸಮಾಜದ ರಕ್ಷಣೆಯಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ತು ಮುಖಂಡ ಶರಣ್ ಪಂಪ್‌ವೆಲ್ ಹೇಳಿದ್ರೆ. ಆದ್ರೆ ಇದು ಪ್ರಚೋದನಕಾರಿ ಭಾಷಣ ಎಂದು ಶರಣ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಉಡುಪಿ ಜಿಲ್ಲಾ ನ್ಯಾಯಾಧೀಶರಿಂದ ಜಾಮೀನು ಮಂಜೂರಾಗಿದೆ.