Recent Posts

Monday, April 14, 2025
ಸುದ್ದಿ

ಸಂಸದ ನಳಿನ್ ಆರೋಗ್ಯ ಕೇಂದ್ರಕ್ಕೆ ಬೇಟಿ: ರೋಗಿಗಳ ಆರೋಗ್ಯ ವಿಚಾರಣೆ – ಕಹಳೆ ನ್ಯೂಸ್

ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲು ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ ಕ್ಕೆ ಬೇಟಿ ನೀಡಿ ಆರೋಗ್ಯ ಕೇಂದ್ರದಲ್ಲಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಬಳಿಕ ಆರೋಗ್ಯ ಕೇಂದ್ರ ದಲ್ಲಿರುವ ರೋಗಿಗಳ ಆರೋಗ್ಯ ವಿಚಾರಿಸಿದರು.

ಮಲೇರಿಯಾ ಡೆಂಗ್ಯೂ ಸಹಿತ ಇತರ ರೋಗಿಗಳು ಎಷ್ಟು ದಾಖಲಾಗಿದ್ದಾರೆ ಮತ್ತು ಎಷ್ಟು ರೋಗಗಳು ಪತ್ತೆಯಾಗಿದೆ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ವೈದ್ಯಾಧಿಕಾರಿ ಗಳ ಬಳಿ ಮಾಹಿತಿ ಪಡೆದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರ ದಲ್ಲಿ ಎಷ್ಟು ಹುದ್ದೆ ಖಾಲಿಯಿದೆ ಮತ್ತು ಈಗೀರುವ ಹುದ್ದೆ ಯಲ್ಲಿ ಯಾವ ರೀತಿ ಕೆಲಸಗಳನ್ನು ಮಾಡುತ್ತೀರಿ ಎಂದು ಕೇಳಿ ಮಾಹಿತಿ ಪಡೆದ ಬಳಿಕ ಖಾಲಿಯಿರುವ ಹುದ್ದೆ ಯನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಲು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಾರ್ಷಿಕ ಲೆಕ್ಕಪತ್ರದಲ್ಲಿ ಆದ ವ್ಯತ್ಯಾಸಗಳನ್ನು ಸರಿಪಡಿಸಲು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯಕ್ ತಾ.ಪಂ.ಅದ್ಯಕ್ಷ ಚಂದ್ರ ಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ . ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಮತ್ತಿತರರು ಉಪಸ್ಥಿತರಿದ್ದರು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ