Friday, September 20, 2024
ಸುದ್ದಿ

ರಾಜೇಶ್ ನಾಯಕ್ ಅದ್ಯಕ್ಷತೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿಯ ಮಹಾಸಭೆ – ಕಹಳೆ ನ್ಯೂಸ್

ಮಂಗಳೂರು: ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಅವರ ಅದ್ಯಕ್ಷತೆಯಲ್ಲಿ ಇತರ ಗಣ್ಯ ಸಮಿತಿಯ ಸದಸ್ಯರನ್ನೊಳಗೊಂಡ ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿಯ ಮಹಾಸಭೆ ತಾಲೂಕು ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮತನಾಡಿದ ಅವರು ವಾರ್ಷಿಕ ಲೆಕ್ಕಪತ್ರ ದಲ್ಲಿ ಕೆಲವೊಂದು ಲೋಪದೋಷಗಳನ್ನು ಸರಿಪಡಿಸಿ ವಾರ್ಷಿಕ ಸಭೆಯಲ್ಲಿ ಸ್ಪಷ್ಟವಾದ ಮಾಹಿತಿಯನ್ನು ಒದಗಿಸುವ ಕೆಲಸ ಯಾಕೆ ಮಾಡುವುದಿಲ್ಲ. ಅಸ್ಪಷ್ಟ ವಾದ ಮಾಹಿತಿ ನೀಡಬೇಡಿ. ಮುಂದಿನ ಸಭೆಯಲ್ಲಿ ಈ ರೀತಿಯ ತಪ್ಪು ಪುನಾರವರ್ತನೆ ಆಗದಂತೆ ನೋಡಿಕೊಳ್ಳಿ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಗತ್ಯವಾಗಿ ಬೇಕಾದ ವೈದ್ಯರ ಸಹಿತ ಸಿಬ್ಬಂದಿ ಗಳ ನೇಮಕಾತಿ ಯ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದರು. ತುರ್ತು ಅಗತ್ಯ ವಾದ ವೈದ್ಯಕೀಯ ಸೌಲಭ್ಯ ಗಳು ಒದಗಿಸುವ ಕೆಲಸ ಮಾಡಲು ಬೇಕಾದ ವ್ಯವಸ್ಥೆ ಮಾಡಲು ತಿಳಿಸಿದರು. ಜನರಿಕ್ ಔಷದಿಗೆ ಜನ ಯಾಕೆ ಕಡಿಮೆ ಬರುತ್ತಿದ್ದಾರೆ ಎಂದು ಕೇಳಿದರು.

ಜಾಹೀರಾತು

ಮಹಾಸಭೆ ಯಲ್ಲಿ ಸುಸಜ್ಜಿತ ಅಂಬ್ಯುಲೆನ್ಸ್ ವಾಹನ , ಹೆಚ್ಚವರಿ ಸಿ.ಸಿ.ಟಿ.ವಿ, ಲಿನೆನ್ ಬೆಡ್ ಶೀಟ್ ಸಹಿತ ಅನುಮೇದನೆಗಾಗಿ ಕೆಲವೊಂದು ವಿಷಯಗಳ ನ್ನು ಇದೇ ಸಂದರ್ಭದಲ್ಲಿ ಮಂಡಿಸಿದರು. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಎ.ಜೆ.ಆಸ್ಪತ್ರೆಯ ಆಡಳಿತಾಧಿಕಾರಿ ಪ್ರಶಾಂತ್ ಮಾರ್ಲ , ಇ.ಒ.ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.