Friday, January 31, 2025
ಸುದ್ದಿ

ಜನರ ಜೂತೆ ಆಟವಾಡುತ್ತಿರುವ ನೆಲ್ಯಾಡಿ ಗ್ರಾಮ ಪಂಚಾಯತ್ – ಕಹಳೆ ನ್ಯೂಸ್

ನೆಲ್ಯಾಡಿ ಗ್ರಾಮ ಪಂಚಾಯತ್‌ನಿAದ ಆಧಾರ್ ಕಾರ್ಡ್ ತಿದ್ದುಪಡಿ ಯನ್ನು ಮಾಡಲು ವ್ಯವಸ್ಥೆಯನ್ನು ಮಾಡಲಾಗಿತ್ತು . ಆದರೆ ಆಧಾರ್ ತಿದ್ದುಪಡಿಗೆ ಟೋಕನ್ ಸಿಸ್ಟಮ್ ಇದ್ದರು ಅದರ ಸಮಯ 24ನೇ ತಾರೀಕಿನಂದು 9ಗಂಟೆಗೆ ಟೋಕನ್ ಕೊಡಲಾಯಿತು 25ನೇ ತಾರೀಕು 8:30ಕ್ಕೆ ಟೋಕನ್ ಕೊಡಲಾಯಿತು 26 ನೇ ತಾರೀಕು 6 ಗಂಟೆಗೆ 7 ಜನರಿಗೆ ಹಾಗೂ 7 ಗಂಟೆಗೆ 10 ಜನರಿಗೆ ಟೋಕನ್ ಕೊಡಲಾಯಿತು ಆನಂತರ ಬಂದು ಕಾದು ಕುಳಿತವರಿಗೆ ಟೋಕನ್ ಇಲ್ಲ ಎಂದು ಹಾರಕೆಯ ಉತ್ತರ ಹೇಳಿ ಹೋಗಿರುತ್ತಾರೆ. ಇದರಲ್ಲಿ ಏನು ಗಮನಕ್ಕೆ ಬರುತ್ತದೆ ಎಂದರೆ ಗ್ರಾಮ ಪಂಚಾಯತಿನ ಸದಸ್ಯರು ಅವರಿಗೆ ಬೇಕಾದವರನ್ನು ಕರೆಸಿ ಬಂದವರಿಗೆ ಟೋಕನ್ ಕೊಟ್ಟು ಇ ತರನ್ನು ಮೂರ್ಖರನ್ನಾಗಿ ಮಾಡುವಂತಹ ವ್ಯವಸ್ಥೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಗ್ರಾಮ ಪಂಚಾಯತ್ ಎಂದರೆ ಕೇವಲ ಸದಸ್ಯರಿಗಾಗಿ ಮತ್ತು ಅವರ ಅನುಯಾಯಿಗಳಿಗಾಗಿ ಮಾತ್ರ ಇರುವಂತಹದ್ದ ಅಥವಾ ಗ್ರಾಮಕ್ಕೆ ಸಂಬAಧಪಟ್ಟದ್ದ . ಗ್ರಾಮ ಪಂಚಾಯತಿ ಗ್ರಾಮಕ್ಕೆ ಸಂಬAಧಪಟ್ಟದ್ದು ಆದರೆ ನೋಟಿಸ್ ಬೋರ್ಡಿನಲ್ಲಿ ಟೋಕನ್ ಕೊಡುವ ಸಮಯ ವನ್ನು ಹಾಕಿ ಅದೇ ಪ್ರಕಾರ ಟೋಕನ್ ಕೊಡಬೇಕಾಗಿತ್ತು, ಅದರ ಬದಲು ಒಂದು ದಿನ ಒಂಬತ್ತು ಗಂಟೆಗೆ ಒಂದು ದಿನ ಎಂಟು ವರೆಗೆ ಗಂಟೆಗೆ ಕೊನೆ ಯ ದಿನಆರು ಗಂಟೆಗೆ ಏಳು ಜನರಿಗೆ 7:00 ಗಂಟೆಗೆ ಹತ್ತು ಜನರಿಗೆಕೊಡುತ್ತಾರೆ .ಎಂದಾದರೆ ಇದರ ಅರ್ಥ ಏನು ?ಇದು ನೆಲ್ಲಾಡಿ ಗ್ರಾಮ ಪಂಚಾಯತಿನ ವ್ಯವಸ್ಥೆ ಯೇ ?ಇದು ಒಂದು ಸರಕಾರಿ ಕಚೇರಿ ಎಂದಾದರೆ ಅದಕ್ಕೆ ಸಂಬoಧಪಟ್ಟoತಹ ವ್ಯವಸ್ಥೆಗಳು ಇರುತ್ತವೆ. ಆ ವ್ಯವಸ್ಥೆಯನ್ನ ಪಾಲನೆ ಮಾಡುವುದರಿಂದ ಯಾವುದೇ ಒಬ್ಬ ನಾಗರಿಕನಿಗೆ ಸಮಸ್ಯೆಯಾಗುವುದಿಲ್ಲ ಅದರ ಬದಲು ಮನಸ್ಸಿನ ಇಚ್ಛೆಯಂತೆ ಮಾಡುವುದರಿಂದ ಎಲ್ಲಾ ನಾಗರಿಕರು ತೊಂದರೆಯನ್ನು ಅನುಭವಿಸಬೇಕಾಯಿತು. ಕೆಲವರು ಮೂರು ದಿನದಿಂದ ಟೋಕನಿಗಾಗಿ ಬಂದು ಹೋಗುತ್ತಿದ್ದಾರೆ. ಕೆಲವರು ಎರಡು ದಿನದಿಂದ ಆದರೂ ಇವರಿಗೆ ಟೋಕನ್ ಕನಸಿನ ಮಾತೆ ಆಯ್ತು .ಕೆಲವರ ದೂರದಿಂದ ಆಟೋ ಮಾಡಿಕೊಂಡು ಬಂದು ಶಾಲೆ ಮಕ್ಕಳನ್ನು ರಜೆ ಮಾಡಿಸಿ ಬಂದು ಹೋಗುವುದೇ ಆಗಿದೆ. ಕೆಲವರು ಕೂಲಿ ಕೆಲಸದವರು ರಜೆ ಮಾಡಿ ಎರಡು ದಿನದಿಂದ ಅಲೆದಾಡುತ್ತಿದ್ದಾರೆ .ಇಂತಹ ಆ ವ್ಯವಸ್ಥೆಯ ಆಗರವಾಗಿರುವ ಗ್ರಾಮ ಪಂಚಾಯತ್ ನಿಂದ ಜನರ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ಇದಕ್ಕೆ ಸಂಬAಧಪಟ್ಟವರು ಎಚ್ಚೆತ್ತುಕೊಂಡು ಯಾವುದೇ ಕಚೇರಿಗಳು ವ್ಯವಸ್ಥಿತವಾಗಿ ನಡೆಯುವ ಹಾಗೆ ಗಮನಹರಿಸಬೇಕಾಗಿದೆ .ಇದರಿಂದ ಎಷ್ಟೋ ಜನರು ಅವರವರ ಉದ್ಯೋಗ ಬಿಟ್ಟು ಇದಕ್ಕಾಗಿ ಕಾಯುವಂತ ಸ್ಥಿತಿ ನಿರ್ಮಾಣ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು