Recent Posts

Monday, January 20, 2025
ಸುದ್ದಿ

ರೋಟರಿ ಕ್ಲಬ್ ಬಂಟ್ವಾಳದಲ್ಲಿ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಕಾರ್ಯಕ್ರಮ – ಕಹಳೆ ನ್ಯೂಸ್

ಮಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ ಮತ್ತು ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ , ಲೊರೆಟ್ಟೊ ಇವರ ಸಹಯೋಗದಲ್ಲಿ ಸಮಗ್ರ ಶಿಕ್ಷಣ ಅಭಿಯಾನ ಕಾರ್ಯಕ್ರಮ ದಡಿಯಲ್ಲಿ ವಿಶೇಷ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಕಾರ್ಯಕ್ರಮ ರೋಟರಿ ಕ್ಲಬ್ ಬಂಟ್ವಾಳ ಇಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಂಜುನಾಥ ಆಚಾರ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿಶೇಷ ಮಕ್ಕಳು ಸಮಾಜದಲ್ಲಿ ಇತರ ಮಕ್ಕಳಂತೆ ಬೆಳೆಯುವ ಎಲ್ಲಾ ಅವಕಾಶಗಳನ್ನು ಇಲಾಖೆಯ ಜೊತೆಗೆ ಸಂಘಸಂಸ್ಥೆಗಳ ಸಹಕಾರ ನೀಡಲು ಎಂದಿಗೂ ಹಿಂಜರಿದಿಲ್ಲ ಎಂದು ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂತಹ ಮಕ್ಕಳಲ್ಲಿ ವಿಶೇಷತೆಗಳಿವೆ ಹಾಗಾಗಿ ಇಂತಹ ಅನೇಕ ಮಕ್ಕಳು ಬೇರೆಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ , ಸಾಧನೆ ಮಾಡಲು ಧೈರ್ಯ ತುಂಬುವ ಕೆಲಸ ಆಗಬೇಕಾಗಿದೆ ಎಂದರು. ಕಾರ್ಯಕ್ರಮದ ಅದ್ಯಕ್ಷ ತೆ ವಹಿಸಿ ಮಾತನಾಡಿದ ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ ಕುಂದುಕೊರತೆಗಳನ್ನು ಪರಿಶೀಲಿಸಿ ಅವರಿಗೆ ಅಗತ್ಯವಾದ ವ್ಯವಸ್ಥೆ ಗಳನ್ನು ಕಲ್ಪಿಸುವ ಕೆಲಸ ಇಲಾಖೆಯಿಂದ ಸಂಘ ಸಂಸ್ಥೆಗಳು ಮೂಲಕ ಆಗಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನ್ಯೂನತೆಗಳನ್ನು ಗಮನಿಸಿ ಅವರಿಗೆ ಜೀವನದಲ್ಲಿ ಶಕ್ತಿ ತುಂಬುವ ಕೆಲಸದ ಜೊತೆ ಇಂತಹ ವೈದ್ಯಕೀಯ ಕಾರ್ಯಕ್ರಮ ಗಳನ್ನು ಆಯೋಜಿಸುವ. ದುರ್ಬಲ ವರ್ಗದ ಜನರಿಗೆ ಸಹಾಯ ಮಾಡಲು ಎಲ್ಲರೂ ಮುಂದೆ ಬರಬೇಕು ಎಂದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ವಸಂತ್ ರಾವ್ , ಡಿ.ಐ.ಇ.ಆರ್.ಟಿ. ಮೇನುಕಾದೇವಿ, ಸುರೇಶ್ ಶೆಟ್ಟಿ ಸಿದ್ದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.