ಆ.27ರಂದು ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನೃಸಿಂಹ ಪೀಠಾಧೀಶರ ಚಾತುರ್ಮಾಸ್ಯ ಪ್ರಯುಕ್ತ ನಡೆಯಲಿರುವ ಸಾಧಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ – ಕಹಳೆ ನ್ಯೂಸ್
ಬೆಂಗಳೂರು : ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನೃಸಿಂಹ ಪೀಠಾಧೀಶರ ಚಾತುರ್ಮಾಸ್ಯ ಪ್ರಯುಕ್ತ ಆ.27ರಂದು ಹರಿಹರಪುರ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನೃಸಿಂಹ ಪೀಠ ಚಾತುರ್ಮಾಸ್ಯ ಮಹೋತ್ಸವ ಸೇವಾ ಸಮಿತಿ ವತಿಯಿಂದ ಸಾಧಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ನಡೆಯಲಿದೆ.
ಆ.27ರ ಬೆಳಿಗ್ಗೆ ಬೆಳಿಗ್ಗೆ 11.30ಕ್ಕೆ ಸರಿಯಾಗಿ ಬೆಂಗಳೂರಿನ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ, ಮಹಾಲಕ್ಷ್ಮೀ ಲೇಜೌಟ್ ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹರಿಹರಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರು ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಪ್ರಶಸ್ತಿ ವಿಜೇತ ಹಾಗೂ ಚಲನಚಿತ್ರ ನಿರ್ದೇಶಕರಾದ ಟಿ.ಎಸ್ ನಾಗಾಭರಣ, ಭರತನಾಟ್ಯ ಕಲಾವಿದರಾದ ವಿದುಷಿ ಸಂಯುಕ್ತಾ ಶಂಕರ್, ಸ.ರಿ.ಗ.ಮ.ಪ. ಖ್ಯಾತಿಯ ವಿದುಷಿ ಕುಮಾರಿ ಸಾದ್ವಿನಿ ಕೊಪ್ಪ, ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ಕಲಾವಿದರಾದ ವಿದುಷಿ ಶಿವಶ್ರೀ ಅವರಿಗೆ “ಸಾಧಕಶ್ರೀ ಪ್ರಶಸ್ತಿ” ನೀಡಿ ಗೌರವಿಸಲಾಗುವುದು.
ಕಾರ್ಯಕ್ರಮದಲ್ಲಿ ಚಾತುರ್ಮಾಸ್ಯ ಮಹೋತ್ಸವ ಸೇವಾ ಸಮಿತಿಯ ಗೌರವಾಧ್ಯಕ್ಷರು ಹಾಗೂ ಬೆಂಗಳೂರು ಮಹಾಲಕ್ಷ್ಮೀ ಲೇಜೌಟ್ ನ ಮಾನ್ಯ ಶಾಸಕರು ಹಾಗೂ ಮಾಜಿ ಸಚಿವರು ಸನ್ಮಾನ್ಯ ಶ್ರೀ ಕೆ. ಗೋಪಾಲಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಶ್ರೀ ಕೆಎಚ್ ಮುನಿಯಪ್ಪ, ಜಾರಿ ನಿರ್ದೇಶನಾಲಯದ ವಿಶೇಷ ಸರ್ಕಾರಿ ಅಭಿಯೋಜಕರು,ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಮಹೇಶ್ ಕಜೆ, ಪುತ್ತೂರು ಕಹಳೆ ನ್ಯೂಸ್ ಕೇಬಲ್ ಟಿವಿ ನೆಟ್ವಕ್ರ್ಸ್ ನ ಪ್ರಧಾನ ಸಂಪಾದಕರಾದ ಶ್ಯಾಮ ಸುದರ್ಶನ ಹೊಸಮೂಲೆ, ಸಮಾಜ ಸೇವಕರಾದ ಗುರುದತ್ತ ಪ್ರಭು, ಅಸಗೋಡು ಜಯಸಿಂಹ, ಮಠದ ಆಡಳಿತಾಧಿಕಾರಿಗಳಾದ ಬಿ. ಎಸ್ ರವಿಶಂಕರ್, ಹಾಗೂ ಚಾತುರ್ಮಾಸ್ಯ ಮಹೋತ್ಸವ ಸೇವಾ ಸಮಿತಿಯ ಪ್ರಧಾನ ಸಂಚಾಲಕರಾದ ಬಿ.ಎಸ್. ರಾಘವೇಂದ್ರ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.