Friday, January 24, 2025
ಸುದ್ದಿ

ಬಲ್ಯದಲ್ಲಿ ಬೈಕ್ ಮತ್ತು ಕಾರು ಡಿಕ್ಕಿ ; ಬೈಕ್ ಸವಾರನಿಗೆ ಗಾಯ – ಕಹಳೆ ನ್ಯೂಸ್

ಕಡಬ: ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿ ನಡೆದು ಬೈಕ್ ಸವಾರ ಗಾಯಗೊಂಡಿರುವ ಘಟನೆ ಆ.25 ರಂದು ಬೆಳಿಗ್ಗೆ ಬಲ್ಯದಲ್ಲಿ ನಡೆದಿದೆ.



ಬೆಳ್ತಂಗಡಿ ನಿವಾಸಿ ಭಾಸ್ಕರ ಗಾಯಗೊಂಡಿರುವ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಇವರು ಉಪ್ಪಿನಂಗಡಿಯಿAದ ಕಡಬ ಕಡೆಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದು ಬಲ್ಯ ಕ್ರಾಸ್ ತಲುಪಿದಾಗ ಕಡಬ ಕಡೆಯಿಂದ ಬಂದ ಕಾರು ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ನೆಲ್ಯಾಡಿ ಕಡೆಗೆ ತಿರುಗಿಸಿದಾಗ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯಲ್ಲಿ ಬೈಕ್ ಸವಾರ ಭಾಸ್ಕರ ಅವರು ಬೈಕ್ ಸಮೇತ ರಸ್ತೆಯ ಎಡ ಬದಿಯ ಚರಂಡಿಗೆ ಬಿದ್ದು ಗಾಯಗೊಂಡಿದ್ದರು. ಗಾಯಾಳುವನ್ನು ಆಂಬುಲೆನ್ಸ್ನಲ್ಲಿ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ, ಅಲ್ಲಿನ ವೈದ್ಯರು ತಿಳಿಸಿದಂತೆ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಪಡೆದುಕೊಂಡ ಬಳಿಕ ಬೆಳ್ತಂಗಡಿಯ ಎಸ್‌ಡಿಎಮ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು